ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ರೋಗಿ ಹೊರತು ಬೇರೆಯವರಿಗೆಪ್ರವೇಶ ಇಲ್ಲ ಎಂಬ ನಾಮಫಲಕ ಪ್ರದರ್ಶಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

oplus_2

ಬೀದರ. ಜೂ. 16: ಜಿಲ್ಲೆಯ ಎಲ್ಲಾ ಸ್ಯಾನಿಂಗ್ ಸೆಂಟರ್‍ಗಳಲ್ಲಿ ಗರ್ಭಿಣಿಯರನ್ನು ಹೊರತುಪಡಿಸಿ ಇತರೆ ಸಂಬಂಧಿಕರನ್ನು ಕೊಠಡಿಯ ಒಳಗೆ ಅನುಮತಿ ಇಲ್ಲ ಎಂಬ ಸೂಚನಾ ಫಲಕವನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು, ಒಂದು ವೇಳೆ ಪಿ.ಸಿ. ಮತ್ತು ಪಿ.ಎನ್.ಡಿ ಕಾಯ್ದೆ ಸೆಕ್ಷನ್ 5 ಉಪಸೆಕ್ಷನ್ (2) ಹಾಗೂ ಸೆಕ್ಷನ್ (4) ಉಪಸೆಕ್ಷನ್(4)ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ಜಿಲ್ಲಾ ಮಟ್ಟದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ ಸಲಹಾ ಸಮಿತಿ ಹಾಗೂ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳು ಕೆ.ಪಿಎಂ.ಇ ಕಾಯಿದೆ ಅಡಿಯಲ್ಲಿ ಸರ್ಕಾರವು ಹೊರಡಿಸಿರುವ ಮಾರ್ಗ ಸೂಚಿಯಂತೆ ಜುಲೈ.25 ರೊಳಗಾಗಿ ನಾಮಫಲಕವನ್ನು ಅಳವಡಿಸಿಕೊಂಡು ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಕೆ.ಪಿ.ಎಂ.ಇ ವಿಭಾಗಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬೀದರ ತಾಲೂಕಾ ಆರೋಗ್ಯ ಅಧಿಕಾರಿಗಳು ಹಾಗೂ ಪ್ರಾಧಿಕೃತ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಕಲಿ ವೈದ್ಯರ ಕ್ಲಿನಿಕ್‍ಗಳಾದ ಶ್ರೀಮತಿ ಸುರೇಖಾ ಸ್ಟಾಫ್‍ನರ್ಸ್ ಮು|| ಅಷ್ಟೂರ್ ತಾ|| & ಜಿ|| ಬೀದರ, ಮತ್ತು ಶ್ರೀ ಸಂತೋಷ ಸ್ಟಾಫ್‍ನರ್ಸ್ ಮು|| ಬಕಚೌಡಿ ತಾ|| & ಜಿ|| ಬೀದರ ಸೀಜ್ ಮಾಡಿ ತಲಾ 25 ಸಾವಿರ ರೂಪಾಯಿ ದಂಡವಿಧಿಸಿದರು ಹಾಗೂ ಕಾಂತಾರೆಡ್ಡಿ ಯೋಗಾ ಮತ್ತು ನ್ಯಾಚುರೊಪತಿ ಮು|| ಮನ್ನಳ್ಳಿ ತಾ|| & ಜಿ|| ಬೀದರ ಇವರಿಗೆ ಕೆ.ಪಿ.ಎಂ.ಇ.ಕಾಯ್ದೆ ಪ್ರಕಾರ ನೋಂದಣಿಯನ್ನು ರದ್ದುಗೊಳಿಸಲು ಕ್ರಮವಹಿಸಬೇಕು ಹಾಗು ಜಾಗ ಬದಲಾಯಿಸಿ, ಹೆಸರು ಬದಲಾಯಿಸಿ ಅಲೊಪತಿ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸುವುದು ಕಂಡುಬಂದಲ್ಲಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಅಥವಾ ಜಿ.ಎಂ.ಎಫ್.ಸಿ ಕೋಟ್ರ್ನಲ್ಲಿ (ಪಿ.ಸಿ.ಆರ್) ಕೇಸ್ ದಾಖಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ|| ಧ್ಯಾನೇಶ್ವರ ನಿರಗುಡೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ|| ದಿಲೀಪ್ ಡೋಂಗ್ರೆ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳು ಡಾ|| ಶಿವಶಂಕರ ಬಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಮಹೇಶ ಬಿರಾದಾರ, ಕಾರ್ಯಕ್ರಮ ಅಧಿಕಾರಿಗಳು, ವಿಷಯ ನಿರ್ವಾಹಕ ಮಹೇಶರೆಡ್ಡಿ ಸೇರಿದಂತೆ ಎಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.