ಸ್ಕೌಟ್ ಮತ್ತು ಗೈಡ್ಸ್ ಸಮಾವೇಶ


ಸಂಜೆವಾಣಿ ವಾರ್ತೆ
ಸಂಡೂರು: ಅ: 1:  ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಪ್ರೌಢಶಾಲೆಯಲ್ಲಿ ನಡೆದ ಒಂದು ದಿನದ ಸ್ಕೌಟ್ ಮತ್ತು ಮತ್ತು ಗೈಡ್ಸ್ ಸಮಾವೇಶದ ಕಾರ್ಯಕ್ರಮವನ್ನು ಮತ್ತು ವಾರ್ಷಿಕ ಯೋಜನೆಯ ಕ್ಯಾಲೆಂಡರ್ ಅನ್ನು ಶ್ರೀ ಷಣ್ಮುಖಪ್ಪ ದೈಹಿಕ ಪರಿವೀಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಡೂರು ಇವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಚತ್ರಪತಿ ಶಿವಾಜಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಕೊಟ್ರೇಶಪ್ಪ ಇಸಿಓಗಳಾದ ಶ್ರೀ ಪಾಲಕ್ಷಪ್ಪ ಶ್ರೀ ಜಕಣಾಚಾರಿ ಸ್ಕೌಟ್ ಆಯುಕ್ತರಾದ ರಾಜಶೇಖರ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಾದ ಜಿಎಸ್ ಸೋಮಪ್ಪ ಖಜಾಂಚಿ ಮಹಮ್ಮದ್ ಜಾವೇದ್ ಸಹ ಕಾರ್ಯದರ್ಶಿಯಾದ ಶ್ರೀನಿವಾಸ್ ಮೂರ್ತಿ ಜಂಟಿ ಕಾರ್ಯದರ್ಶಿಯಾದ ಸುನಿತಾ ಕುಮಾರಿ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಸಂಘಟಕರಾದ ಮಹಮದ್ ಬಾಷ ಮುಂತಾದ ಪದಾಧಿಕಾರಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ಸ್ ಮತ್ತು ಬುಲ್ ಬುಲ್ ರೇಂಜರ್ ಮತ್ತು ರೋವರ್ಸ್ ಶಿಕ್ಷಕರು ಭಾಗವಹಿಸಿದ್ದರು ಸಮಾವೇಶವೂ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ನಡೆಯಿತು ಈ ಕಾರ್ಯಕ್ರಮದಲ್ಲಿ 50 ರಿಂದ 60 ತರಬೇತಿ ಪಡೆದ ಶಿಕ್ಷಕರು ಭಾಗವಹಿಸಿದ್ದರು

One attachment • Scanned by Gmail