ಸ್ಕೌಟ್ ಗೈಡ್ ಪಾಲಕ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿದೆ:ಶಿವಕಾಂತ ಹಣಮಶೆಟ್ಟೆ

ಬೀದರ:ಎ.4:ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬ ಗಾದೆ ಮಾತಿನಂತೆ ನಮ್ಮ ಮಕ್ಕಳಿಗೆ ಒಳ್ಳೆಯವರ ಸಂಗದಲ್ಲಿ ಬೆಳೆಯಲು ಬಿಡಬೇಕಾದರೆ ಸ್ಕೌಟ್ ಗೈಡ್ ದಳಕ್ಕೆ ಸೇರಿಸಬೇಕು. ಮಗು ಪರಿಪೂರ್ಣ ವಿಕಾಸಗೊಳ್ಳಬೇಕಾದರೆ, ಶಿಕ್ಷಕ ಮತ್ತು ಪಾಲಕರು ಮಗುವಿನ ಆಸಕ್ತಿಗನುಗುಣವಾಗಿ ಬೆಳೆಯಲು ಮಾರ್ಗದರ್ಶನ ಮಾಡಬೇಕಾಗುತ್ತದೆ. ಸ್ಕೌಟ್ ಗೈಡ್ ಶಿಕ್ಷಕರು ಇವರಿಬ್ಬರ ಸಂವಹನ ಕೊಂಡಿಯಾಗಿ ಮಗುವನ್ನು ಕಾಯಾ, ವಾಚಾ, ಮನಸಾ ಪರಿಶದ್ಧನಾಗಿ ಮಾಡುತ್ತಾನೆ. ಆದುದರಿಂದ ಪಾಲಕರು ಸ್ಕೌಟ್- ಗೈಡ್ ಘಟಕವಿರುವ ಶಾಲೆಗೆ ತಮ್ಮ ಮಕ್ಕಳಿಗೆ ಸೇರಿಸಬೇಕು ಎಂದು ಕಮಲನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕಾಂತ ಹಣಮಶೆಟ್ಟೆ ಕರೆ ಕೊಟ್ಟರು.

ಕಮಲನಗರ ತಾಲೂಕಿನ ಉರ್ದು ಶಾಲೆಯಲ್ಲಿ ನಡೆದ ಸ್ಕೌಟರ್ಸ್ ಮತ್ತು ಗೈಡರ್ಸ ಗಳ ಆನ್ಲೈನ್ ನೋದಣಿ ಮತ್ತು ಸಮಾಲೋಚನಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು

ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ಕೌಟ್ ಸಂಘಟಕ ತರಬೆತಿ ನೀಡುತ್ತಾ, ಅಂತರಂಗ ಬಹಿರಂಗ ಶುದ್ಧವಾಗಿಟ್ಟುಕೊಂಡು ಮೂರು ವರ್ಷದವರಿಂದ ನೂರು ವರ್ಷದ ಯಾವುದೇ ನಾಗರಿಕರು ಅವಕಾಶ ಸಿಕ್ಕಾಗ ಸಮಾಜ ಸೇವೆ ಮಾಡಬಯಸುವ ಯಾರು ಬೇಕಾದರೂ ಸ್ಕೌಟ್ ಸೇರಬಹುದು. ಎಂದು ತಿಳಿಸಿ, ¸ಸ್ಕೌಟ್ ಗೈಡ್ ನಡೆದುಬಂದ ದಾರಿ, ಇತಿಹಾಸ, ವಿಭಾಗಗಳು, ಮಗುವಿಗೆ ಆಯಾ ವಯಸ್ಸಿನಲ್ಲಿರುವ ಆಸಕ್ತಿಗನುಗುಣವಾಗಿ ಕಲಿಸುವ ಕೌಶಲ್ಯ, ನೀತಿಕತೆಗಳ ಮೂಲಕ ಮಗುವಿನಲ್ಲಿ ತರಬೇಕಾದ ಬದಲಾವಣೆ ಕುರಿತು ಉದಾಹರಣೆಗಳ ಮೂಲಕ ತಿಳಿಸಿದರು.

ಹೊಳಸಮುದ್ರ ಸಮೂಹ ಸಂಪನ್ಮೂಲ ವ್ಯಕ್ತಿ ಮಾದಪ್ಪಾ ಮಡಿವಾಳ ಮಾತನಾಡಿ ಹೊಸ ತಾಲೂಕಿನಲ್ಲಿ ಭೌತಿಕ ಬೆಳವಣಿಗೆ ಜೊತೆ ನೈತಿಕ ಮನೋಭಾವ ಬೆಳೆಸಲು ಎಲ್ಲಾ ಶಿಕ್ಷಕರು ಸ್ಕೌಟ್ ಗೈಡ್ ಮೂಲಕ ಶ್ರಮಿಸೋಣ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃಧ್ಧಿಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಅಡಿಯಲ್ಲಿ ಬಸ್ವರಾಜ ಪಾಟಿಲ ಸೇಡಂರವರು ಕಲಬುರ್ಗಿಯಲ್ಲಿ ನೀಡಿರುವ ಸ್ಕೌಟ್ ಗೈಡ್ ಮೂಲತರಬೇತಿ ಪಡೆದ ಶಿಕ್ಷಕರಿಗೆ ಘಟಕ ಪ್ರಾರಂಭಿಸುವ ವಿಧಾನದ ಬಗ್ಗೆ ತಿಳಿಸಲಾಯಿತು. ಔರಾದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಾಂತ ಬಿಡವೆ, ಸ್ಥಳೀಯ ಕಮಲನಗರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾದ್ಯಕ್ಷೆ ಸುವರ್ಣಾ ಮಡಿವಾಳ, ಹಿರಿಯ ಸ್ಕೌಟರ್ ನಾಗನಾಥ ಸ್ವಾಮಿ, ಕಮಲನಗರ ಸಿ.ಆರ್.ಪಿ ನಾಗೇಶ ಸಂಗಮೆ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಯಾಗಿ ಸ್ಕೌಟ್ ಮಾಸ್ಟರ್ ಹೈದರ್ ಅಲಿ ಅವರಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಯಿತು. ಮೊದಲಿಗೆ ಶಿವಕುಮಾರ ಮೆಣಸೆ ಸ್ಕೌಟ್ ಧ್ವಜಾರೋಹಣ ನಡೆಸಿಕೊಟ್ಟು, ಎಲ್ಲರನ್ನು ಸ್ವಾಗತಿಸಿದರು. ದಶರಥ ಔರಾದೆ ವಂದಿಸಿದರು. ಸ್ಕೌಟ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯ ನಿರ್ವಹಣೆ ನಬಿ ಬಾಗವಾನ ಮಾಡಿದರು.