ಸ್ಕೌಟ್ ಗೈಡ್ ಗಳಿಂದ ಪಕ್ಷಿಗಳ ಬಾಯಾರಿಕೆ ನೀಗಿಕೆ

ಮಾನ್ವಿ,ಏ.೦೩- ಬಿಸಿಲ ಬೇಗೆಯಲ್ಲಿ ಬಳಲುವ ಪಕ್ಷಿಗಳಿಗೆ ನೀರಿನ ದಾಹ ಹಾಗೂ ಆಹಾರದ ಕೊರತೆ ನೀಗಿಸಲು ಪಕ್ಷಿಗಳಿಗೆ ಅನುವಾಗುವ ನಿಟ್ಟಿನಲ್ಲಿ ಮಾನ್ವಿ ಪಬ್ಲಿಕ್ ಸ್ಕೂಲ್ ಸ್ಕೌಟ್ ಗೈಡ್ ಗಳು ತಮ್ಮ ಮನೆಯ.ಟೆರೆಸ್ ಮೇಲೆ ಜೇಡಿ ಮಣ್ಣಿನ ಪಾತ್ರೆಯಲ್ಲಿ ಅಕ್ಕಿ,ಜೋಳ,ಗೋಧಿ ಹಾಕಿ,ಇನ್ನೊಂದರಲ್ಲಿ ಕುಡಿಯುವ ನೀರನ್ನು ಹಾಕಿ ಪಕ್ಷಿಗಳ ದಾಹ ಹಾಗೂ ಹಸಿವೆ ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ.ಸಿ ಆರ್ ಪೀ ಸೋಮಶೇಖರ್,ದೈಹಿಕ ಶಿಕ್ಷಣ ಅಧಿಕಾರಿ ಲಾಲ್ ಸಿಂಗ್,ಕ್ಷೇತ್ರ ಶಿಕ್ಷಣ ಅಧಿಕಾರಿ ಚಂದ್ರಶೇಖರ್,ಸ್ಥಳೀಯ ಸಂಸ್ಥೆ ಅಧ್ಯಕ್ಷ ಬಲರಾಮ ಕೃಷ್ಣ, ಕಾರ್ಯದರ್ಶಿ ರಾಮಲಿಂಗಪ್ಪ,ಜಿಲ್ಲಾ ಮುಖ್ಯ ಆಯುಕ್ತೆ ಅಜೀಜಾ ಸುಲ್ತಾನ್,ಶಾಲಾ ಮುಖ್ಯ ಗುರು ನಾಗರತ್ನ ದೇಸಾಯಿ ಶ್ಲಾಗಿಸಿ ಎಲ್ಲಾ ಮಕ್ಕಳು ಈ ರೀತಿ ಕಾರ್ಯ ಪ್ರವೃತ್ತರಾದರೆ ಪಕ್ಷಿ ಸಂಕುಲ ಉಳಿಸಬಹುದು.ಬೇಸಿಗೆ ಶಿಬಿರ, ಮೋಜು ಮಸ್ತಿ ಜೊತೆ ಜೊತೆಗೆ ಪ್ರಕೃತಿ ಉಳಿಸುವ ಇವರ ಪ್ರಯತ್ನ ಯಶಸ್ವಿಯಾಗಲಿ ಎಂದು ಪಕ್ಷಿ ಪ್ರೇಮಿ ಸಲ್ಲಾ ಉದ್ದಿನ್ ಹಾರೈಸಿದ್ದಾರೆ.