ಸ್ಕೌಟ್ & ಗೈಡ್ಸ್ ಸಂಸ್ಥಾಪಕರ ದಿನಾಚರಣೆ


ಸಂಜೆವಾಣಿ ವಾರ್ತೆ
ಸಂಡೂರು :ಫೆ:25 ತಾಲ್ಲೂಕು ಮಟ್ಟದ ಸ್ಕೌಟ್ಸ್ ಮತ್ತ ಗೈಡ್ಸ್ ಸಂಸ್ಥಾಪಕರಾದ ಬೇಡನ್ ಪೋವೆಲ್ ಅವರ ಜನುಮದಿನಾಚರಣೆಯನ್ನ ಆಚರಿಸಲಾಯಿತು. ಸಂಸ್ಥಾಪಕರ ದಿನಾಚರಣೆಯನ್ನು ಎಸ್.ಇ.ಎಸ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಥ ಸಂಚಲನ ಪ್ರಬಂಧ ಸ್ಪರ್ದೇ ಗಾಳಿಪಟ ತಯಾರಿಸುವುದು. ಚರ್ಚಾಕೂಟ ಜನಪದ ನೃತ್ಯ ಕ್ರಾಪ್ಟ್ ರಂಗೋಲಿ ಮುಂತಾದ ಸ್ಪರ್ದೆಗಳನ್ನು ಸ್ಕೌಟ್ ಮತ್ತು ಗೈಡ್ಸ್ ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಯಿತು. ಅಂದು ಬೆಳಿಗ್ಗೆ ಸ್ಕೌಟ್ಸ್ ಧಜಾರೋಹಣವನ್ನು ಮಾಡಲಾಯಿತು. ಸಂಡೂರು ಪಟ್ಟಣದ ವಿವಿಧ ವೃತ್ತಗಳ ಮುಖಾಂತರ ಪಥಸಂಚಲನವನ್ನು ನಡೆಸಲಾಯಿತು. ಪಥಸಂಚಲನದುದ್ದಕ್ಕೂ ಸಂಸ್ಥಾಪಕರಾದ ಜೀತು ಸೇಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ|| ಐ.ಆರ್. ಅಕ್ಕಿ, ಸ್ಕೌಟ್ಸ್ ಮತ್ತ ಗೈಡ್ಸ್ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ಡಿ. ನಾಗನಗೌಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಳಾದ ಡಾ|| ಜಗದೀಶ್ ಎಸ್. ಬಸಾಪುರ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಕೆ.ಎಮ್.ಇ. ಮೈನ್ಸ್ ಮುಖ್ಯಸ್ಥ ಜೋಷಿ ಜಯಣ್ಣ, ತಾಲ್ಲೂಕು ಕಾರ್ಯದರ್ಶಿ ಜಿ.ಎಸ್. ಸೋಮಪ್ಪ ಖಜಾಂಚಿ ಮೊಹಮ್ಮದ್ ಜಾವಿದ್ ಮುಖ್ಯಗುರುಗಳಾದ ಕೊಟ್ರೇಶ, ಕಲ್ಲಯ್ಯ ಹಿರಮೇಠ ಪದಾಧಿಕಾರಿಗಳಾದ ಸುನಿತಾ ದಿವಾಕರ ರಾಘವೇಂದ್ರ, ಲೋಕೇಶ್, ನಾಗರಾಜ ಆರಾಧ್ಯ ಶಿಕ್ಷರಾದ ರಮೇಶ್, ನಾಗವೇಣಿ ಜಯಶ್ರೀ ಜ್ಯೋತಿ ಯರ್ರಿಸ್ವಾಮಿ ಸಿಸ್ಟರ್ ಆಲಿನ್ ಸ್ಕೌಟ್ ಗೈಡ್ಸ್ ಕಬ್ ಬುಲ್ ಶಿಕ್ಷಕಕರು ಭಾಗವಹಿಸದರು. ಈ ಸಮಾರಂಭದಲ್ಲಿ 450 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಿಸಿದರು. ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ವಿತರಿಸಲಾಯಿತು.