ಸ್ಕೌಟ್ – ಗೈಡ್ಸ್ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ

ಚಿತ್ರದುರ್ಗ.ನ.17: ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಆದೇಶದನ್ವಯ ರಾಜ್ಯ ವೀಕ್ಷಕರ ತಂಡ ಆಗಮಿಸಿ ಚಿತ್ರದುರ್ಗ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಚಿತ್ರದುರ್ಗ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ತಂಡ ಜಿಲ್ಲೆಯ ಪ್ರಗತಿಯ ಬಗ್ಗೆ ಮತ್ತು ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ತುಮಕೂರು ಜಿಲ್ಲಾ ಮುಖ್ಯ ಆಯುಕ್ತರಾದ ವೇಣುಗೋಪಾಲ ಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ತಳಮಟ್ಟದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಪ್ರತಿ ಗ್ರಾಮೀಣ ಮಟ್ಟದಲ್ಲಿ ಸ್ಕೌಟ್ ಗೈಡ್ ಪ್ರಾರಂಭವಾಗಬೇಕು ಎಂದು ಹೇಳಿದರು.  ವೀಕ್ಷಕರಾಗಿ ಆಗಮಿಸಿದ್ದ ತುಮಕೂರು ಜಿಲ್ಲಾ ತರಬೇತಿ ಆಯುಕ್ತರಾದ ಗಂಗಾಧರ್ ಮಾತನಾಡಿ, ತಾಲೂಕು ಹಂತಗಳಲ್ಲಿ ಬೇಕಾದ ಉಪ ಸಮಿತಿಗಳು, ಹಾಗೂ ಆಡಿಟ್‌ಗಳ ಬಗ್ಗೆ ಮಾಹಿತಿ ಪಡೆದು ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು. ನಿವೃತ್ತಿ ಡಿಡಿಪಿಐ, ರಾಜ್ಯ ಸಂಸ್ಥೆಯ ಸಹಾಯಕ ಆಯುಕ್ತ ಅಂಜಿನಪ್ಪ ಮಾತನಾಡಿ, ಜಿಲ್ಲೆಯಲ್ಲಿ ದಾನಿಗಳಿಂದ ಮಕ್ಕಳಿಗೆ ಸಮವಸ್ತ್ರ ನೀಡುವ ಕೆಲಸವಾಗಬೇಕು. ಕಾಲೇಜು ಹಂತಗಳಲ್ಲಿ ಮಕ್ಕಳಿಂದ ಸಂಗ್ರಹವಾದ ಶುಲ್ಕ ಹೆಚ್ಚಿದ್ದು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಕಾರ್ಯವಾಗಬೇಕು ಎಂದರು. ಜಿಲ್ಲಾ ಕಾರ್ಯದರ್ಶಿ ಬಿಎ ಲಿಂಗಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಪ್ರಗತಿಗಳು ಮತ್ತು ಮುಂದೆ ನಡೆಯುವ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು.  ಸಭೆಯಲ್ಲಿ ಜಿಲ್ಲಾ ಖಜಾಂಚಿ ಅನ್ವರ್ ಪಾಷಾ, ತುಮಕೂರು ಸಹಾಯಕ ತರಬೇತಿ ಆಯುಕ್ತರು ಮಹೇಶ್, ಜಿಲ್ಲಾ ಸಹಕಾರ್ಯದರ್ಶಿ ರಮಹತ್ ಉಲ್ಲಾ, ಜಿಲ್ಲಾ ಪದಾಧಿಕಾರಿಗಳಾದ ಪರಮೇಶ್ವರಪ್ಪ, ಸತ್ಯನಾರಾಯಣ ನಾಯ್ಡು, ಡಿಓಟಿ ರವಿ, ಜಿಲ್ಲಾ ಸಂಘಟಕರಾದ ಪಾಟೀಲ್ ಭಾಗವಹಿಸಿದ್ದರು.