ಸ್ಕೌಟ್ಸ್ ಮತ್ತು ಗೈಡ್ ಶಿಕ್ಷಕರ ಸಮಾವೇಶ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.14: ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ದಳ ಪ್ರಾರಂಭಿಸಿ, ಶಿಸ್ತು, ಸೇವಾ ಮನೋಭಾವನೆ, ಪ್ರಥಮ ಚಿಕಿತ್ಸೆ, ಅಗ್ಗದ ಕೌಶಲ್ಯತೆ, ಶಿಬಿರ ಹಾಕುವ ಕುರಿತು ಕಲಿಸುವಂತೆ ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ನಾಗರಾಜ ಹೇಳಿದರು.
ನಗರದ ರಾಜೀವಗಾಂಧಿ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ “ಸ್ಕೌಟ್ಸ್ ಮತ್ತು ಗೈಡ್ ಶಿಕ್ಷಕರ ಸಮಾವೇಶ”ದಲ್ಲಿ ಮಾತನಾಡಿದರು.
ಶಿಕ್ಷಕರಿಗೆ ಪೂರಕವಾಗುವ ಕೈಪಿಡಿಯನ್ನು ಅನಾವಣರಗೊಳಿಸಿದರು. ಸ್ಕೌಟ್ಸ್ ನಿವೃತ್ತಿ ಶಿಕ್ಷಕ ಶಿವಾಚಾರ್ಯ ಸ್ವಾಮಿಗೆ ಸನ್ಮಾನಿಸಿದರು. “ವಿಶ್ವಪರಿಸರ ವಚ್ಯು೯ವೆಲ್ “ ನಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತ್ರಿಪತ್ರ,ಬಹುಮಾನ ವಿತರಿಸಲಾಯಿತು.
ಜಿಲ್ಲಾ ಗೈಡ್ಸ್ ತರಬೇತಿ ಆಯುಕ್ತೆ ಜಯಶ್ರೀ ಜೋಷಿ, ಬಿ.ಆರ್.ಪಿ. ಯೋಗನಂದಯ್ಯ, ಅಕ್ಕಿ ಗಿರಣಿ ಮಾಲೀಕರ ಅದ್ಯಕ್ಷ  ನಾಗಲಾಪುರ ಬಸವರಾಜಪ್ಪ, ಸ್ತ್ರೀರೋಗ ತಜ್ಞೆ ಗಂಗಮ್ಮ, ತಾಲ್ಲೂಕು ಭಾ.ಸ್ಕೌ.ಗೈ. ಸಂಸ್ಥೆ ಕಾಯ೯ದಶಿ೯ ನಟರಾಜಸ್ವಾಮಿ, ಶಿಕ್ಷಕರು ಇದ್ದರು.