
ಮಾನ್ವಿ.ಜ.೧೩-ಬ್ಯಾಗ ವಾಟ ದ ವಿದ್ಯಾ ವಾಹಿನಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ರ ೧೫೮ ನೇ ಜನ್ಮ ದಿನ ಆಚರಣೆ ರಾಷ್ಟ್ರೀಯ ಯುವ ದಿನ ವನ್ನು ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸರಳ ವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಶರಣಯ್ಯಾ ಸ್ವಾಮಿ ಮಾತನಾಡಿ ದೇಶ ನಿರ್ಮಾಣ ದಲ್ಲಿ ಯುವ ಶಕ್ತಿಯ ಸದ್ಬಳಕೆ ಆಗಬೇಕು.ಸರಿಯಾದ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆದು ವಿವೇಕಾನಂದರ ಆದರ್ಶಗಳನ್ನು ಮೈ ಗೂಡಿಸಿ ಕೊಳ್ಳಲು ಕರೆ ನೀಡಿದರು.ಈ ಸಂದರ್ಭದಲ್ಲಿ ಸ್ಕೌಟ್ ಮಾಸ್ಟರ್ ,ಶಿಕ್ಷಕ ವೃಂದ ಹಾಗೂ ಇತರೆ ವಿದ್ಯಾರ್ಥಿಗಳು ಹಾಜರಿದ್ದರು.