ಸ್ಕೌಟ್ಸ್ -ಗೈಡ್ಸ್ ಶಿಬಿರ,ಜೀವನ ಕೌಶಲಕ್ಕೆ ಸಹಕಾರಿ

ಕೋಲಾರ,ಏ,೧೧- ಸ್ಕೌಟ್ಸ್ ಗೈಡ್ಸ್ ಶಿಬಿರಗಳಿಂದ ಮಾತ್ರ ಜೀವನ ಕೌಶಲಗಳನ್ನು ಕಲಿಯಲು ಸಾಧ್ಯ ಎಂದು ಕೋಲಾರ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸ್ಕೌಟ್ ಆಯುಕ್ತರಾದ ಕೆ.ಆರ್.ಸುರೇಶ್ ರವರು ತಿಳಿಸಿದರು.
ನಗರದ ಸ್ಕೌಟ್ ಭವನದಲ್ಲಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಆಯೋಜಿಸಿದ್ದ ಹನ್ನೋಂದನೆ ವರ್ಷದ ಸ್ಕೌಟ್ಸ್ ಗೈಡ್ಸ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಿಂದಲೇ ಸೇವೆ ಮಾಡುವ ಗುಣಗಳನ್ನು ಹವ್ಯಾಸವಾಗಿ ರೂಡಿಸುವಂತೆ ಮಾಡುವುದೇ ಸಂಸ್ಥೆಯ ಮೂಲ ಆಶಯವಾಗಿದೆ ಎಂದರು. ಜಿಲ್ಲಾ ಸಹಾಯಕ ಆಯುಕ್ತರಾದ ವಿಠಲ್ ರಾವ್‌ಮಾತನಾಡಿ ಶಿಬಿರದಲ್ಲಿ ಕಲಿತ ಅಂಶಗಳನ್ನು ತಮ್ಮ ನೆರೆ ಹೊರೆಯ ಸ್ನೇಹಿತರ ಬಳಿ ಹಂಚಿಕೊಂಡಾಗ ಮತ್ತಷ್ಟು ಜನರಿಗೆ ಈ ಸಂಸ್ಥೆಯ ಚಟುವಟಿಕೆಗಳ ಪರಿಚಯವಾಗಲಿದೆ ಎಂದರು ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು ಮಾತನಾಡಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಪಧಾದಿಕಾರಿಗಳಾದ ಉಮಾದೇವಿ, ವಿನಯ್ ಕುಮಾರ್, ನಿರಂಜನ್, ಹರೀಶ್ ,ಅಕ್ಷಿತಾ ಮುಂತಾದವರು ಇದ್ದರು.