ಸ್ಕೌಟ್ಸ್ ಗೈಡ್ಸ್: ಪ್ರಥಮ ಸ್ಥಾನ

ರಾಯಚೂರು.ಡಿ.೨೧-ಸ್ಕೌಟ್ಸ್ ಮತ್ತು ಗೈಡ್ಸ್ ರಾಯಚೂರು ಜಿಲ್ಲಾ ಸಂಸ್ಥೆಯು ೨೦೧೯-೨೦ನೇ ಸಾಲಿನ ತನ್ನ ಒಟ್ಟಾರೆ ಸಾಧನೆಗಾಗಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.
ರವಿವಾರ ಬೆಂಗಳೂರಿನ ರಾಜ್ಯ ಕೇಂದ್ರ ಕಚೇರಿ ಶಾಂತಿ ಗೃಹದಲ್ಲಿ ನಡೆದ ೧೦೨ನೇ ರಾಜ್ಯ ಪರಿಷತ್ತಿನ ಸಭೆಯಲ್ಲಿ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಮಂತ್ರಿಗಳಾದ ಪಿ.ಜಿ.ಆರ್.ಸಿಂಧ್ಯಾ ಅವರು ಜಿಲ್ಲಾ ಮುಖ್ಯ ಆಯುಕ್ತೆ ಆಜೀಜಾ ಸುಲ್ತಾನ, ಕಾರ್ಯದರ್ಶಿ ಬಸವರಾಜ ಗದಗಿನ,ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಬಸವರಾಜ ಬೊರೆಡ್ಡಿ,ಆಲಿಯ ಖಾನುಮ್,ರಾಜ್ಯ ಪ್ರತಿನಿಧಿಗಳಾದ ರಜನಿ. ಡಿ ಹಾಗೂ ರಾಮದಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಜಿಲ್ಲೆಯ ಈ ಸಾಧನೆಯನ್ನು ಬಲರಾಮ ಕೃಷ್ಣ, ರಾಮಲಿಂಗಪ್ಪ, ನರಸಿಂಹ ಮೂರ್ತಿ ದೇಸಾಯಿ ಮಾನ್ವಿ, ಶರಣೇಗೌಡ ಸಿಂಧನೂರು, ಪ್ರಲ್ಹಾದ ರಾಜ್ ದೇಸಾಯಿ ಸಿಂಧನೂರು, ಡಾಕ್ಟರ್ ಮಲ್ಲಿಕಾರ್ಜುನ್ ಇತ್ಲಿ, ಶಿವಪ್ಪ ಹಸಂಕಲ್, ಅಮಾರಗುಂಡಪ್ಪ ಮೇಟಿ, ಶರಣಪ್ಪ
ಲಿಂಗಸಗೂರು, ತಿರುಪತಿ ಸುಗೂರ್, ರಂಗನಾಥ್. ಹೆಚ್.ಸಾಗರ್, ಎನ್.ಶೇಖರ್ ರಾಯಚೂರು ಸೇರಿದಂತೆ ಜಿಲ್ಲಾ ಮತ್ತು ಎಲ್ಲಾ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.