ಸ್ಕೌಟ್ಸ್, ಗೈಡ್ಸ್:ಫುಡ್ ಪ್ಯಾಕೆಟ್, ಬಾಳೆಹಣ್ಣು ವಿತರಣೆ

ರಾಯಚೂರು, ಜೂ.೮-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಆಹಾರದ ಪಾಕೆಟ್ ಗಳನ್ನು ನಗರದ ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಇನ್ನೂ ಇತರೆ ಸ್ಥಳಗಳಲ್ಲಿ ಇರುವ ಸಾರ್ವಜನಿಕರಿಗೆ, ಹಾಗೂ ಮಹಿಳೆಯರಿಗೆ ೧೩೨ ಫುಡ್ ಪ್ಯಾಕೆಟ್, ಬಾಳೆಹಣ್ಣು ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಲಯನ ಡಾ.ಆರ್.ಬಸವರಾಜ ,ಲಯನ ಅಮೃತ,ಲಯನ ಹನುಮಂತರಾವ್ ಲಯನ ಬಸವರಾಜ ,ಲಯನ್ ಮಲ್ಲಿಕಾರ್ಜುನ ಬಾಳಿ , ಲಿಯೋ,ಕು.ಅಂಬಣ್ಣ ನಾಯಕ ಎಸ್.ಜಿ.ವಿ, ವಿಜಯಭಾಸ್ಕರರೆಡ್ಡಿ,ಲಿಯೋ ಪ್ರತಾಪರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.