ಸ್ಕೌಟ್ಸ್ ಅಂಡ್ ಗೈಡ್ಸ್ ಕಚೇರಿಯಲ್ಲಿ ಸರಳ ವಿಶ್ವಪುಸ್ತಕ ದಿನಾಚರಣೆ

???????????????????????????????????????????????????????????????????????????????????????????????????????????????????????????????????????????????????????????????????????????????????????????????????

 ಚಿತ್ರದುರ್ಗ: ಏ.೨೪: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳ ರಚನೆಯೊಂದಿಗೆ ಸಾಹಿತ್ಯ ಪರಿಷತ್ತು ವಿಧ್ಯಾರ್ಥಿಗಳ ಜ್ಞಾನ ದೇಗುಲ ಮಾಡುವ ಆಶಯ ನನ್ನದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಲತೇಶ್ ಅರಸ್ ಹರ್ತಿಕೋಟೆ ಅವರು ತಿಳಿಸಿದರು.ಚಿತ್ರದುರ್ಗ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಪುಸ್ತಕ ದಿನಾಚರಣೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತಯಾಚನೆ ಮಾಡಿ ಮಾತನಾಡಿ ಎಲ್ಲಾ ದಿನಾಚರಣೆಗಳಿಗಿಂತ ಪುಸ್ತಕ ದಿನಾಚರಣೆ ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಸಾಹಿತ್ಯ ಪರಿಷತ್ತು ನಿಂತಿರುವುದೇ ಅಕ್ಷರಗಳ, ಅಕ್ಷರಗಳು ಪುಸ್ತಕಗಳ ರೂಪದಲ್ಲಿ ಹೊರ ಬಂದಾಗ ಮಾತ್ರ ಸಾಹಿತ್ಯಕ್ಕೆ ಅರ್ಥ ಅಂತಹ ಪುಸ್ತಕ ದಿನಾಚರಣೆಯಲ್ಲಿ ನಾನು ನಿಮ್ಮಲ್ಲಿ ಮತ ಬೇಡುತ್ತಿದ್ದು ದಯಮಾಡಿ ಈ ಬಾರಿ ನನಗೆ ಮತಹಾಕಿ ಗೆಲ್ಲಿಸಿ ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಹೆಚ್ಚಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿರುವ ಅನೇಕರು ಕನ್ನಡ ಸಾಹಿತ್ಯ ಪರಿಷತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಎಲ್ಲರನ್ನು ಪರಿಷತ್ತಿನೊಂದಿಗೆ ನಿಕಟ ಸಂಬಂಧ ಇರುವಂತೆ ಮಾಡುತ್ತೇವೆ. ಮತ್ತು ವಿದ್ಯಾರ್ಥಿಗಳಿಗೆ ಸೂಕ್ತವಾದ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಮಾಡಲು ನಿಮ್ಮ ಸಹಕಾರ ಅಗತ್ಯ ಎಂದರು.   ಸ್ಕೌಟ್ಸ್ ಅಂಡ್ ಗೈಡ್ಸ್ನ ಜಿಲ್ಲಾ ಸಂಘಟಕ ಶಿಕ್ಷಕ ಸಿ.ರವಿ ಮಾತನಾಡಿ, ಸಾಹಿತ್ಯ-ಸಂಸ್ಕೃತಿ, ನಾಡು-ನುಡಿ ನೆಲ-ಜಲದ ಪ್ರಾಮಾಣಿಕ ಸೇವಕನಾಗಿ, ಕ್ರಿಯಾಶೀಲ ಸಂಘಟಕನಾಗಿ, ಕನ್ನಡಪರ ಕಾರ್ಯಕರ್ತನಾಗಿ ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಮಾಲತೇಶ್ ಅರಸ್ ಅವರು ಅಪಾರ ಕೆಲಸ ಮಾಡಿದ್ದು, ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಲು ಅರ್ಹ ಅರ್ಭ್ಯರ್ಥಿಯಾಗಿದ್ದಾರೆ ಎಂದರು.ಇದೇ ವೇಳೆ ಸ್ಕೌಟ್ಸ್ ಅಂಡ್ ಗೈಡ್ಸ್ನ ಜಿ.ಬಿ.ಸಿ ಪಾಟೀಲ್, ಜ್ಯೋತಿ, ಕಸಾಪ ಸಂಘಟಕ ನಾಗಭೂಷನ್ ಬಂಡೆ. ಶ್ರೀನಿವಾಸ್ ಸಿದ್ದೇಶ್ ಇತರರಿದ್ದರು.