ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ

ದಾವಣಗೆರೆ, ಮೇ 25- ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಅಂತರ ವಿಶ್ವವಿದ್ಯಾಲಯ ದಕ್ಷಿಣ ವಲಯ ರಾಷ್ಟ್ರೀಯ ರೋಲ್ ಬಾಲ್ ಸ್ಕೇಟಿಂಗ್ ಪಂದ್ಯಾವಳಿಗಳನ್ನು  ಏರ್ಪಡಿಸಲಾಗಿತ್ತು. ಈ ಪಂದ್ಯಾವಳಿಗಳಲ್ಲಿ ಬೇರೆ ಬೇರೆ ರಾಜ್ಯಗಳ ಮೂವತ್ತು ವಿಶ್ವವಿದ್ಯಾಲಯಗಳ ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾವಳಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ತಂಡಕ್ಕೆ ದಾವಣಗೆರೆ ನಗರದ ಪೃಥ್ವಿಕಾಂತ್ ಕೊಟ್ಟಿಗಿ ಇವರು ತರಬೇತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ್ದು, ಪ್ರಪ್ರಥಮವಾಗಿ ಕರ್ನಾಟಕ ರಾಜ್ಯಕ್ಕೆ ತೃತೀಯ ಚಾಂಪಿಯನ್ ಶಿಪ್ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಇವರನ್ನು ದಕ್ಷಿಣ ವಲಯದ ರೋಲ್‌ಬಾಲ್ ಕಾರ್ಯದರ್ಶಿ ಸುಬ್ರಹ್ಮಣ್ಯ, ಕರ್ನಾಟಕ ರಾಜ್ಯದ ರೋಲ್‌ಬಾಲ್ ಕಾರ್ಯದರ್ಶಿ ಗೋವಿಂದಯ್ಯ, ದೇಶದ ರೋಲ್‌ಬಾಲ್ ಕಾರ್ಯದರ್ಶಿ ಚೇತನ್ ಅಭಿನಂದಿಸಿದ್ದಾರೆ.