ಸ್ಕೇಟಿಂಗ್‌ನಲ್ಲಿ ಹಿತಾಗೆ ಕಂಚಿನ ಪದಕ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮೇ.೨೨: ಗೋವಾದ ಮಡಗಾಂವ್‌ನಲ್ಲಿ ನಡೆದ ನ್ಯಾಷನಲ್‌ ಓಪನ್‌ ಸ್ಕೇಟಿಂಗ್‌ ರ್ಯಾಂಕಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ನಗರದ ನ್ಯೂ ಹಾಟ್‌ ವೀಲ್‌ ಕ್ಲಬ್‌ನ ಹಿತಾ ಪ್ರವೀಣ್‌  ೫ ರಿಂದ೭ ವರ್ಷದ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ. ನಗರದ ಗೋಪಾಳ ಸರ್ಕಾರಿ ಕ್ರೀಡಾ ಸಂಕೀರ್ಣದಲ್ಲಿ ತರಬೇತಿ ಪಡೆಯುತ್ತಿರುವ ಹಿತಾಳಿಗೆ ವಿಶ್ವಾಸ್‌ ಮತ್ತು ಅತೀಶ್‌ ತರಬೇತಿ ನೀಡುತ್ತಿದ್ದಾರೆ. ಸ್ಕೇಟಿಂಗ್‌ ಪ್ರತಿಭೆ ಹಿತಾ ಆರೋಗ್ಯ ಇಲಾಖೆ ನೇತ್ರಾಧಿಕಾರಿ ಪ್ರವೀಣ್‌ ಹಾಗೂ ಸೌಮ್ಯ ಅವರ ಪುತ್ರಿಯಾಗಿದ್ದಾಳೆ. ರಾಷಟ್ರ ಮಟ್ಟದ ಸ್ಪರ್ಧೆಯಲ್ಲಿ ಪದಕ ಗೆದ್ದ ಹಿತಾಗೆ ಸ್ಕೇಟಿಂಗ್‌ ಕ್ಲಬ್‌ ಅಭಿನಂದನೆ ಸಲ್ಲಿಸಿದೆ.