ಸ್ಕೂಟಿ ಹಿಂಬದಿಗೆ ಗುದ್ದಿದ ಕ್ರೂಜರ್ ಸ್ಥಳದಲ್ಲಿ ರಕ್ತಸ್ರಾವದಿಂದ ಯುವಕನ ಸಾವು

ಅಫಜಲಪುರ : ಫೆ.26:ಪಟ್ಟಣದ ಘತ್ತರಗಾ ಅಫಜಲಪುರ ರಸ್ತೆಯ ಹೃದಯ ಭಾಗದಲ್ಲಿ ಅಕ್ಕಮಹಾದೇವಿಯ ಗುಡಿ ಹತ್ತಿರ ಶನಿವಾರ ರಾತ್ರಿ ಲಕ್ಷ್ಮಿ ಗುಡಿಯಿಂದ ಸ್ಕೂಟಿ ವಾಹನದ ಮೇಲೆ ಬಸವೇಶ್ವರ ವೃತ್ತಕ್ಕೆ ಬರುವಾಗ ಹಿಂಬದಿಯಿಂದ ಕ್ರೋಜರ್ ವಾಹನವನ್ನು ಗುದ್ದಿದ ಪರಿಣಾಮವಾಗಿ ಎದುರುಗಡೆ ಬರುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೈಲಿಯ ಚಕ್ರದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿ
ರಕ್ತಸ್ರಾವದಿಂದ ಸ್ಕೂಟಿ ಬೈಕ್ ಸವಾರ ಮಲ್ಲಿಕಾರ್ಜುನ ಮದರಿ (25) ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ದುರ್ಘಟನೆ ಸಂಭವಿಸಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿದೆ.
ಬೈಕ್ ಸವಾರ ಮಲ್ಲಿಕಾರ್ಜುನ್ ಹಾಗೂ ಆತನ ಸ್ನೇಹಿತ ವಾಸುದೇವ ದೊಡ್ಡಮನಿ ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಇಬ್ಬರೂ ಕೂಡಿಕೊಂಡು ಪಟ್ಟಣದ ಲಕ್ಷ್ಮಿ ಗುಡಿಯಿಂದ ಬಸವೇಶ್ವರ ವೃತ್ತದ ಕಡೆಗೆ ಬರುತ್ತಿರು ವಾಗಲಕ್ಷ್ಮಿ ಗುಡಿಯ ಹತ್ತಿರ ಹಿಂಬದಿಯಿಂದ ಕ್ರೋಜರ್ ಗುದ್ದಿದ ಪರಿಣಾಮವಾಗಿ ಬೈಕ್ ಸವಾರ ಮಲ್ಲಿಕಾರ್ಜುನ್ ಮದರಿ ಸ್ನೇಹಿತ ಹಿಂಬದಿ ಕಳಿತಿದ್ದ ವಾಸುದೇವ ದೊಡ್ಮನಿ ಗಂಭೀರ ಗಾಯಗಳಾಗಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.ಮೃತ ಬೈಕ ಸವಾರ ಮಲ್ಲಿಕಾರ್ಜುನ ಮದರಿ (25) ಮೂಲತಃ ತಾಲೂಕಿನ ಮದರಿ ಗ್ರಾಮದವರಾಗಿದ್ದು. ಸುಮಾರ ವರ್ಷಗಳಿಂದ ಪಟ್ಟಣದಲ್ಲಿ ಮನೆ ಕಟ್ಟಿಸಿಕೊಂಡು ವಾಸವಾಗಿದ್ದರು.
ಶವಪರೀಕ್ಷೆ ನಂತರ ಮೃತ ದೇಹವನ್ನು ಹನ್ನೊಂದು ಗಂಟೆಗೆ ಅಫಜಲಪುರ ಪಟ್ಟಣದ ದುದನಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತಿಕ್ರಿಯೆಯನ್ನು ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅಫಜಲಪೂರ ಠಾಣೆಯ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.