ಸ್ಕೂಟರ್-ಬಸ್ ಮುಖಾಮುಖಿ ಡಿಕ್ಕಿ: ಸ್ಕೂಟರ್ ಸವಾರ ಸಾವು

ಹನೂರು: ಜೂ 19:- ಸ್ಕೂಟರ್ ಮತ್ತು ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲೆ ಮಾದೇಶ್ವರ ಬೆಟ್ಟದ ಮುಖ್ಯರಸ್ತಯ ತಾಳುಬೆಟ್ಟದ ಹತ್ತಿರ ಶನಿವಾರ ಮಧ್ಯಾಹ್ನದ ನಂತರ ನಡೆದಿದೆ.
ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ಮುಖ್ಯರಸ್ತಯ ತಾಳು ಬೆಟ್ಟದ ನಾಲ್ಕನೇ ತಿರುವಿನ ಹತ್ತಿರ ಬಸ್ ಮತ್ತು ಸ್ಕೂಟರ್ ಮುಖ ಮುಖ ಡಿಕ್ಕಿಯಾಗಿ ಘಟನೆ ನಡೆದಿದ್ದು ಸ್ಕೂಟರ್ ಸಾವಾರ ಚಿನ್ನಪ್ಪ (34) ಎಂಬ ವ್ಯಕ್ತಿಯು ಚಿಂತಜನಾಕ ನಾಗಿ ಆಂಬುಲೆನೇಷ ನಲ್ಲಿ ಸಾಗುಸುವ ವೇಳೆ ಸಾವನಪ್ಪಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಗ್ರಾಮಾಂತರ ಬನಶಂಕರಿಯಲ್ಲಿ ಮೂಲತಹ ಆಟೋ ಚಾಲಕನಾಗಿದ್ದ ಸುಮಾರು 34 ವಷ9ದ ಚಿನ್ನಪ್ಪ ಎಂಬ ವ್ಯಕ್ತಿಯು ಈ ಅಪಘಾತದಲ್ಲಿ ಸಾವನ್ನಪ್ಪಿದ್ದು. ಈತನು ತನ್ನ (ಏ ಂ – 5 ಐಖಿ / 0574 ) ಅಕ್ಟವಾ ಸ್ಕೂಟರ್ ನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಕೆಎಸ್‍ಆರ್ಟಿಸಿ (ಏಂ – 09/ ಈ 5326) ಬಸ್ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಈತನು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವೇಳೆ ತಾಳುಬೆಟ್ಟದಲ್ಲಿ ಕೈಮುಗಿದು ಬೆಟ್ಟಕ್ಕೆ ತೆರಳುವಾಗ ಜೊತೆಯಲ್ಲಿ ತಾಳುಬೆಟ್ಟದ ಬಳಿ ಮಂಗಳ ಮುಖಿಯೊಬ್ಬರನ್ನು ತನ್ನ ಬೈಕ್ ನಲ್ಲಿ ಜೊತೆಯಾಗಿ ಕರೆದುಕೊಂಡು ಹೋಗಿದ್ದಾನೆ. ಅಪಘಾತದಲ್ಲಿ ಮಂಗಳಮುಖಿಯ ಕೈ ಮುರಿದಿದೆ ಎನ್ನಲಾಗಿದ್ದು ಮಂಗಳ ಮುಖಿ ಮಾಹಿತಿ ಯಾರೆಂದು ತಿಳಿದು ಬಂದಿಲ್ಲ. ಅಪಘಾತ ನಡೆದ ಸಂದರ್ಭದಲ್ಲಿ ಅಲ್ಲಿದ್ದಂತಹ ಸ್ಥಳೀಯರು 108 ಆಂಬುಲೆನ್ಸ್ ಗೆ ಕರೆ ಮಾಡಿ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಯನ್ನ ವೈದ್ಯಾಧಿಕಾರಿ ಡಾ.ಪ್ರಕಾಶ್ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಸಾರಿಗೆ ಬಸ್ ಮತ್ತು ಸ್ಕೂಟರ್ ಡಿಕ್ಕಿಯಾಗಿ ಬೈಕ್ ಸವಾರ ಸಾವನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಗೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ.