ಸ್ಕೂಟರ್ ಗೆ ಲಾರಿ ಡಿಕ್ಕಿ ನಿವೃತ್ತ ನೌಕರ ಸಾವು

ಹಗರಿಬೊಮ್ಮನಹಳ್ಳಿ.ಏ.೧೯ ಪಟ್ಟಣದ ಬಸವೇಶ್ವರ ಬಜಾರ್ ದಲ್ಲಿ ಇಂದು ಸಾಯಂಕಾಲ ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ನಿವೃತ್ತ ರೇಷ್ಮೆ ಇಲಾಖೆಯ ಪಂಪಣ್ಣ_(68) ಮೃತಪಟ್ಟಿರುತ್ತಾರೆ
ಹಳೆ ಊರಿನ ನಿವಾಸಿ ಪಂಪಣ್ಣ ಮಾರುಕಟ್ಟೆಗೆ ಹೋಗುವಾಗ ಸಾಯಂಕಾಲ ನಡೆದ ದುರಂತ ಲಾರಿ ಚಾಲಕ ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಕೂಟರು ಲಾರಿಗೆ ಸಿಕ್ಕಾಕಿಕೊಂಡು ವೃದ್ಧ ಸುಮಾರು ದೂರ ರಸ್ತೆ ಮೂಲಕ ಎಳೆದುಕೊಂಡು ಹೋಗಿರುವ ಘಟನೆ ಇಡೀ ಬಜಾರದ ಜನ ನೋಡಿ ಹೌ ರಿದ್ದಾರೆ. ಲಾರಿ ಚಾಲಕ ಡ್ರಿಂಕ್ಸ್ ಮಾಡಿದ್ದರಿಂದ ಲಾರಿಯನ್ನು ನಿಲ್ಲಿಸದೆ ಚಲಾಯಿಸಿದ ಕಾರಣ ಈ ಒಂದು ಅಮಾನವೀಯ ಘಟನೆ ನಡೆದಿದೆ. ಇದನ್ನು ಕಂಡು ಸಾರ್ವಜನಿಕರು ಲಾರಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿರುವುದರಿಂದ ಚಾಲಕ ಬಚಾವಾಗಿದ್ದಾನೆ. ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್, ಪಿಎಸ್ಐ ವೈಶಾಲಿ ಝಳಕಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.