ಸ್ಕೂಟರ್‌ಗೆ ಕಾರ್ ಡಿಕ್ಕಿ: ಗ್ರಾಮಲೆಕ್ಕಾಧಿಕಾರಿ ಮೃತ್ಯು

ಸಾಗರ, ನ.೨೧- ತಾಲೂಕಿನ ಆಲಳ್ಳಿ ಬಳಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದಿದ್ದರಿಂದ ಗ್ರಾಮಲೆಕ್ಕಾಧಿಕಾರಿ ಓರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಸಿದ್ಧಾಪುರ ತಹಸಿಲ್ಧಾರ ಕಚೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಸೊರಬ ಹೆಚ್ಚೆ ಗ್ರಾಮದ ಉಷಾ  ಮೃತ ದುರ್ದೈವಿಗಳು. ಉಷಾ ಕಳೆದ ಕೆಲವು ವರ್ಷಗಳಿಂದ ಸಿದ್ಧಾಪುರದಲ್ಲಿ ಕಾರ್ಯನಿರ್ವಹಿಸುತಿದ್ದರು. ಸಾಗರದಲ್ಲಿದ್ದುಕೊಂಡೆ  ಕಾರ್ಯನಿಮಿತ್ತ ಪ್ರತಿದಿನ ಸ್ಕೂಟರಿನಲ್ಲಿಯೇ ಸಿದ್ದಾಪುರಕ್ಕೆ  ಬರುತ್ತಿದ್ದರೆನ್ನಲಾಗಿದೆ. ಗುರುವಾರ ಸಾಗರದಿಂದ ಸಿದ್ಧಾಪುರಕ್ಕೆ ಬರುತಿದ್ದಾಗ ಆಲಳ್ಳಿ ಬಳಿ ಈ ಅಪಘಾತ ಸಂಭವಿಸಿದೆ.