ಸ್ಕೀಂ ವರ್ಕರ್‌ ಗೆ ಫ್ರಂಟ್‌ಲೈನ್ ವಾರಿಯರ್ ಪರಿಗಣಿಸಲು ಒತ್ತಾಯ; ಪ್ರತಿಭಟನೆ

ದಾವಣಗೆರೆ. ಸೆ.೨೩; ಕೋವಿಡ್ ಸೇವೆಗೆ ನೇಮಿಸಲ್ಪಟ್ಟಿರುವ ಎಲ್ಲಾ ಸ್ಕೀಂ ವರ್ಕರ್‌ಗಳನ್ನು ಫ್ರಂಟ್‌ಲೈನ್ ನೌಕರರೆಂದು ಘೋಷಿಸಬೇಕೆಂದು ಒತ್ತಾಯಿಸಿಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಿ ಹಾಗೂ ನಿಗದಿತ ಅವಧಿಯೊಳಗೆ ಸಾರ್ವತ್ರಿಕ ಮತ್ತು ಉಚಿತ ಲಸಿಕೀಕರಣವನ್ನು ಖಾತ್ರಿಪಡಿಸಲು ವ್ಯಾಕ್ಸಿನ್ ಹಂಚಿಕೆಯನ್ನು ಸರ್ಕಾರದ ಹಿಡಿತಕ್ಕೆ ಒಳಪಡಿಸಬೇಕು.ಎಲ್ಲಾ ಆರೋಗ್ಯ ಸಿಬ್ಬಂದಿ, ಫ್ರಂಟ್‌ಲೈನ್ ನೌಕರರು ಹಾಗೂ ಸ್ಕೀಂ ವರ್ಕರ್‌ಗಳೂ ಸೇರಿದಂತೆ, ಮಹಾಮಾರಿ ನಿರ್ವಹಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸುರಕ್ಷಾ ಸಾಧನ, ಸಲಕರಣೆ ಇತ್ಯಾದಿಗನ್ನು ಖಾತ್ರಿಪಡಿಸಿ. ಎಲ್ಲಾ ಫ್ರಂಟ್‌ಲೈನ್ ನೌಕರರಿಗೂ ನಿಯತಕಾಲಿಕವಾಗಿ ಉಚಿತ ಕೋವಿಡ್-19 ಪರೀಕ್ಷೆ ನಡೆಸಿ. ಕೋವಿಡ್ ಸೋಂಕಿತ ಫ್ರಂಟ್‌ಲೈನ್ ನೌಕರರಿಗೆ ಆಸ್ಪತ್ರೆ ಸೇವೆಯಲ್ಲಿ ಮೊದಲ ಆದ್ಯತೆ ನೀಡಿ.ಶೇ 6 ಜಿಡಿಪಿಯನ್ನು ಆರೋಗ್ಯ ಕ್ಷೇತ್ರಕ್ಕೆ ಒದಗಿಸಿ. ಸಮರ್ಪಕ ಪ್ರಮಾಣದ ಬೆಡ್‌ಗಳು, ಆಮ್ಲಜನಕ ಮತ್ತಿತರ ಆರೋಗ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರ ಮತ್ತು ಆರೋಗ್ಯ ಸಂಪನ್ಮೂಲಗಳನ್ನು ಬಲಪಡಿಸಿ. ಸಮರ್ಪಕ ಪ್ರಮಾಣದ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಖಾತ್ರಿಪಡಿಸಬೇಕು. ಸೇವಾವಧಿಯಲ್ಲಿ ಮೃತಪಟ್ಟ ಎಲ್ಲಾ ಫ್ರಂಟ್‌ಲೈನ್ ನೌಕರರಿಗೆ 50 ಲಕ್ಷ ರೂಪಾಯಿಗಳ ವಿಮಾ ಸುರಕ್ಷೆ ಒದಗಿಸಬೇಕು. ಕೋವಿಡ್ ಸೋಂಕಿತ ಫ್ರಂಟ್‌ಲೈನ್ ನೌಕರರು ಹಾಗೂ ಅವರ ಕುಟುಂಬಸ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು.  ಹೆಚ್ಚುವರಿಯಾಗಿ, ಕೋವಿಡ್-19 ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಗುತ್ತಿಗೆ ನೌಕರರು ಮತ್ತು ಸ್ಕೀಂ ವರ್ಕರ್‌ಗಳಿಗೆ ಮಾಸಿಕ 10,000ಗಳ ಕೋವಿಡ್ ಅವಘಢ ಭತ್ಯೆ ಒದಗಿಸಬೇಕು.ಸೇವಾ ಅವಧಿಯಲ್ಲಿ ಸೋಂಕಿತರಾದ ಪ್ರತಿಯೊಬ್ಬರಿಗೂ ಕನಿಷ್ಟ ಹತ್ತು ಲಕ್ಷ ರೂಪಾಯಿಗಳ ಪರಿಹಾರ. ಕಾರ್ಮಿಕ-ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಸ್ಕೀಂ ವರ್ಕರ್‌ಗಳನ್ನು ಕಾರ್ಮಿಕರೆಂದು ಪರಿಗಣಿಸಿ. ಎಲ್ಲಾ ಸ್ಕೀಂ ವರ್ಕರ್‌ಗಳಿಗೂ ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಒದಗಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಿಪ್ಪೇಸ್ವಾಮಿ ಅಣಬೇರು, ಭಾರತಿ, ಮಧು ತೊಗಲೇರಿ, ಮಂಜುಳಾ, ನಿರ್ಮಲ, ಶಾಂತ, ಫರ್ ವೀನ್ ಬಾನು, ಭಾರತಿ, ಪುಷ್ಪ, ಆಶಾ, ವಿಜಯಲಕ್ಷ್ಮಿ, ಚಂದ್ರಮ್ಮ, ಅನಿತಾ, ತಿಪ್ಪಕ್ಕ ಇನ್ನಿತರರು ಪಾಲ್ಗೊಂಡಿದ್ದರು.
 Attachments area