ಸ್ಕಾಟ್ಲ್ಯಾಂಡ್ ನಲ್ಲಿ ಸೋನಮ್ ಕಪೂರ್ ಅಭಿನಯದ ’ಬ್ಲೈಂಡ್’ ಫಿಲ್ಮ್ ಶೂಟಿಂಗ್ ಆರಂಭ.

ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಗ್ಲಾಸ್ಗೊ, ಸ್ಕಾಟ್ಲ್ಯಾಂಡ್ ನಲ್ಲಿ ತಮ್ಮ ಅಪ್ ಕಮಿಂಗ್ ಫಿಲ್ಮ್ ನ ಶೂಟಿಂಗ್ ಆರಂಭಿಸಿದ್ದಾರೆ. ಈ ಫಿಲ್ಮ್ ಇದೇ ಹೆಸರಲ್ಲಿ ನಿರ್ಮಿಸಲಾದ ಹಿಟ್ ಕೊರಿಯನ್ ಆಕ್ಷನ್ ಥ್ರಿಲ್ಲರ್ ಫಿಲ್ಮ್ ನ ಹಿಂದಿ ರಿಮೇಕ್ ಆಗಿದೆ. ಇದರಲ್ಲಿ ಸೋನಮ್ ಕಪೂರ್ ಜೊತೆಗೆ ಪೂರಬ್ ಕೊಹ್ಲಿ ಮತ್ತು ವಿನಯ ಪಾಠಕ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ.


’ಬ್ಲೈಂಡ್’ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯ ಕಥೆಯ ಆಧಾರಿತವಾಗಿದೆ. ಒಂದು ಕಾರು ದುರ್ಘಟನೆಯಲ್ಲಿ ಈಕೆಯ ಕಣ್ಣಿನ ದೃಷ್ಟಿ ಕಳೆದುಕೊಂಡಿರುತ್ತದೆ. ಆದರೆ ಈಕೆ ತನ್ನ ಒಳಗಿನ ಸೆನ್ಸ್ ಡೆವಲಪ್ ಮಾಡಿ ಪೊಲೀಸ್ ಕೇಸಿನಲ್ಲಿ ಸಹಾಯ ಮಾಡುತ್ತಾರೆ. ಈ ಫಿಲ್ಮ್ ನ ನಿರ್ದೇಶನವನ್ನು ಶೋಮ್ ಮಖೀಜಾ ಮಾಡುತ್ತಿದ್ದಾರೆ.


ಫಿಲ್ಮ್ ಕ್ರಿಟಿಕ್ಸ್ ತರನ್ ಆದರ್ಶ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವಾಗಿ ಪೋಸ್ಟ್ ಶೇರ್ ಮಾಡುತ್ತಾ ಸೋನಮ್ ಕಪೂರ್ ರ ಕ್ರೈಮ್ ಥ್ರಿಲ್ಲರ್ ಶೂಟಿಂಗ್ ಸ್ಕಾಟ್ಲ್ಯಾಂಡ್ ನ ಗ್ಲಾಸ್ಗೋ ದಲ್ಲಿ ಆರಂಭವಾಗಿದೆ. ಸೀರಿಯಲ್ ಕಿಲ್ಲರ್ ನ ಹುಡುಕಾಟದಲ್ಲಿ ಓರ್ವ ಅಂಧ ಮಹಿಳಾ ಪೊಲೀಸ್ ಅಧಿಕಾರಿಯ ಕಥೆ ಇದಾಗಿದೆ ಎಂದಿದ್ದಾರೆ.ಸೋನಮ್ ಕಪೂರ್ ಅವರ ಮೊದಲ ಫಿಲ್ಮ್ ’ಸಾಂವರಿಯಾ’ ಫ್ಲಾಪ್ ಆಗಿತ್ತು. ಆದರೆ ಆಕೆ ನಿರಾಶರಾಗದೆ ಅಭಿನಯದಲ್ಲಿ ಹೆಚ್ಚಿನ ತರಬೇತಿ ಪಡೆದರು. ಆನಂತರ ಸೋನಮ್ ದಿಲ್ಲಿ ೬, ರಾಂಝಣ, ಭಾಗ್ ಮಿಲ್ಖಾ ಭಾಗ್, ಪ್ರೇಮ್ ರತನ್ ಧನ್ ಪಾಯೋ, ನೀರಜಾ, ಪ್ಯಾಡ್ ಮ್ಯಾನ್, ವೀರೆ ದಿ ವೆಡಿಂಗ್, ಸಂಜೂ… ಮುಂತಾದ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ.

ಪತ್ನಿ ಟ್ವಿಂಕಲ್ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ ಅಕ್ಷಯ ಕುಮಾರ್.

ನಟ ಅಕ್ಷಯ್ ಕುಮಾರ್ ತನ್ನ ಪತ್ನಿ ಟ್ವಿಂಕಲ್ ರ ಬರ್ತ್ ಡೇಗೆ ವಿಶ್ ಮಾಡಿ ಬದುಕಿನ ಎಲ್ಲಾ ನಿರ್ಧಾರಗಳಿಗೆ ನೀವು ನನ್ನ ಜೊತೆಗಿರಿ ಎಂದು ಹೇಳಿದ್ದಾರೆ.
ನಟಿ ಟ್ವಿಂಕಲ್ ಖನ್ನಾ ತನ್ನ ೪೭ನೆಯ ಜನ್ಮದಿನವನ್ನು ಆಚರಿಸಿದರು.


ಈ ಸಂದರ್ಭದಲ್ಲಿ ಟ್ವಿಂಕಲ್ ರ ಪತಿ ಅಕ್ಷಯ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಒಂದು ರೋಮ್ಯಾಂಟಿಕ್ ನೋಟ್ ಬರೆದು ಶೇರ್ ಮಾಡಿ ಬರ್ತಡೇ ವಿಶ್ ಮಾಡಿದ್ದಾರೆ. ಇದರ ಜೊತೆ ಟ್ವಿಂಕಲ್ ಜೊತೆಗಿದ್ದ ತಮ್ಮಒಂದು ಸುಂದರ ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಟ್ವಿಂಕಲ್ ರ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳನ್ನು ಹಾಕಿದ್ದಾರೆ.


ಫೋಟೋ ಶೇರ್ ಮಾಡಿದ ಅಕ್ಷಯ ಕುಮಾರ್ ” ಜೀವನದ ಪ್ರತೀ ನಿರ್ಧಾರಗಳಿಗೂ ನೀವು ನನ್ನ ಜೊತೆಗಿರುವಿರಿ. ಹ್ಯಾಪಿ ಬರ್ತ್ ಡೇ ಟೀನಾ” ಎಂದಿದ್ದಾರೆ.
ಈ ಫೋಟೋದಲ್ಲಿ ಅಕ್ಷಯ್ ಮತ್ತು ಟ್ವಿಂಕಲ್ ಇಬ್ಬರೂ ನಗುತ್ತಾ ಪಾರ್ಕೊಂದರಲ್ಲಿ ಸೈಕಲ್ ಹಿಡಿದುಕೊಂಡು ಪೋಸು ನೀಡಿದ್ದಾರೆ.
ಅಕ್ಷಯ ಮತ್ತು ಟ್ವಿಂಕಲ್ ಖನ್ನಾ ರ ವಿವಾಹ ಕ್ಕೆ ೨೦ ವರ್ಷ ಪೂರ್ಣಗೊಳ್ಳಲಿದೆ.
೧೭ ಜನವರಿ ೨೦೨೧ ಅವರ ವೆಡ್ಡಿಂಗ್ ಅನಿವರ್ಸರಿ ಆಗಿದೆ ಇವರಿಗೆ ಇಬ್ಬರು ಮಕ್ಕಳಿದ್ದಾರೆ .ಮಗ ಆರವ್ ಮತ್ತು ಮಗಳು ನಿತರಾ. ತಾನು ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಗಾಗಿ ಅಕ್ಷಯ್ ಸಮಯ ನೀಡುತ್ತಾರೆ.