ಸಂಜೆವಾಣಿ ವಾರ್ತೆಸಂಡೂರು :22: :ತಾಲೂಕಿನ ಅರಾಧ್ಯ ದೈವವಾದ ಶ್ರೀ ಕುಮಾರಸ್ವಾಮಿಯ ಸ್ಕಂದ ಸೃಷ್ಟಿಯ ಅಂಗವಾಗಿ ವಿಶೇಷವಾದ ಪೂಜಾ ಕಾರ್ಯಗಳು ಬೆಳಗಿನಿಂದಲೇ ನಡೆದವು.ಬೆಳಿಗ್ಗೆ 6.30ಕ್ಕೆ ಸರಿಯಾಗಿ ಅಭಿಷೇಕ ಪೂಜಾಕಾರ್ಯಗಳು 7.30ರ ವರೆಗೆ ನಡೆದವು, ಪ್ರಮುಖವಾಗಿ ಪಂಚಾಮೃತ ಅಭಿಷೇಕ, ಕಲ್ಪವೃಕ್ಷ ತೀರ್ಥದ ಅಭಿಷೇಕ, ವಿಶೇಷ ಅಭಿಷೇಕ ನೆರವೇರಿಸಿ ಎಲ್ಲಾ ಭಕ್ತರಿಗೆ ದಿವ್ಯ ದರ್ಶನವನ್ನು ಮಾಡಿಲಾಯಿತು. 8.30ಕ್ಕೆ ಸರಿಯಾಗಿ ವಿಶೇಷ ಅಲಂಕಾರ, ಬಂಗಾರದ ಅಭರಣಗಳ ಧಾರಣೆ ಮಾಡಿ ಮಹಾ ಮಂಗಳಾರುತಿ ಕಾರ್ಯಕ್ರಮವನ್ನು ಮಾಡಲಾಯಿತು, ಯಥಾ ಪ್ರಕಾರ ಘೋರ್ಪಡೆ ವಂಶಸ್ಥರು ಅಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ನಂತರ ಭಕ್ತರು ಸರತಿಯ ಸಾಲಿನಲ್ಲಿ ಸಾಗಿ ದರ್ಶನ ಪಡೆಯುವ ಮೂಲಕ ಪುನೀತರಾದರು.