ಸ್ಕಂದಗಿರಿ ಪಾರ್ವತಾಂಭ ರಥೋತ್ಸವ: ವೈಭವಕಣ್ತುಂಬಿಕೊಂಡ ಭಕ್ತವೃಂದ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.24- ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಸ್ಕಂದಗಿರಿ ಪಾರ್ವತಾಂಭ ರಥೋತ್ಸವವು ಗುರುವಾರ ದಂದು ವೈಭವದಿಂದ ನಡೆಯಿತು. ಪುರಾಣ ಐತಿಹ್ಯದ ಕ್ಷೇತ್ರವಾಗಿರುವ ಪಾರ್ವತಿ ಬೆಟ್ಟದಲ್ಲಿ ವರ್ಷ ಕ್ಕೊಮ್ಮೆ ನಡೆಯುವ ಈ ರಥೋತ್ಸವಕ್ಕೆ ಸಹಸ್ರಾರು ಮಂದಿ ಪಾಲ್ಗೊಂಡುತೇರು ಎಳೆದು ಪುನೀತರಾದರು.
ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆ ತಾಲೂಕು ಆಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿತ್ತು. ಕಳೆದ ಎರಡು ವರ್ಷದ ಹಿಂದೆ ರಥೋತ್ಸವದ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ಕಂದೇಗಾಲ ಗ್ರಾಮದ ಸರ್ಪಭೂಷಣ್ ಹಾಗೂ ಕಬ್ಬಹಳ್ಳಿ ಗ್ರಾಮದ ಸ್ವಾಮಿ ಎಂಬ ಇಬ್ಬರು ಯುವಕರು ಮೃತ ಪಟ್ಟಿದ್ದರಿಂದ ಜಿಲ್ಲಾಡಳಿತವು ರಥೋತ್ಸವದ ವೇಳೆ ಯಾವುದೇ ಅಹಿತರಕರ ಘಟನೆ ಜರುಗದಂತೆ ಸೂಕ್ತ ಪೆÇಲೀಸ್ ಬಂದೋ ಬಸ್ತ್ ಒದಗಿಸಿತ್ತು.
ರಥೋತ್ಸವಕ್ಕೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ, ಶಿಂಡನಪುರ, ಕೊಡಸೋಗೆ, ಸೋಮನಪುರ, ಬೊಮ್ಮಲಾಪುರ, ತೆರಕಣಾಂಬಿ ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು.
ಈ ಬಾರಿ ರಥೋತ್ಸವಕ್ಕೆ ವಿಶೇಷ ಅತಿಥಿಯಾಗಿ ಬಿಗ್ ಬಾಸ್ ಸ್ಪರ್ಧಿಯಾದ ಹಳ್ಳಿಕಾರ್ ಒಡೆಯ ಖ್ಯಾತಿಯ ಸಂತೋμï ಭಾಗಿಯಾಗಿದ್ದರು. ನೆಚ್ಚಿನ ಸೆಲೆಬ್ರಿಟಿ ನೋಡಲು ಯುವಕರು ಮುಗಿಬಿದ್ದರು. ಇನ್ನು, ಜಾತ್ರೆಯಲ್ಲಿ ಸಂತೋμï ಅವರ ಹೋರಿಗಳು ಕೂಡ ಭಾಗಿಯಾಗಿ ಜನರ ಗಮನ ಸೆಳೆದವು.