ಸೌಹಾರ್ದ ಸಹಕಾರಿ ದಿನಾಚರಣೆ

ಅಳ್ನಾವರ,ಜ2: ಗ್ರಾಮೀಣ ಭಾಗದ ಜನರಿಗೆ ಸಕಾಲದಲ್ಲಿ ಆರ್ಥಿಕ ವ್ಯವಸ್ಥೆ ಒದಗಿಸಿ ಅವರ ಜೀವನ ಮಟ್ಟ ಸುಧಾರಣೆಗೆ ಅವಿರತವಾಗಿ ಶ್ರಮಿಸುತ್ತಿರುವ ಮಿಲ್ಲತ್ ಸೌಹಾರ್ದ ಸಹಕಾರಿಯ ಕೊಡುಗೆ ವಿಶಿಷ್ಟ ಎಂದು ಸಹಕಾರಿಯ ಉಪಾಧ್ಯಕ್ಷ ಎಂ. ಎಂ. ತೇಗೂರ ಹೇಳಿದರು.
ಇಲ್ಲಿನ ಆಜಾಧ ರಸ್ತೆಯಲ್ಲಿನ ಸಹಕಾರಿಯ ಕಚೇರಿಯಲ್ಲಿ ಬಾನುವಾರ ಬೆಳಿಗ್ಗೆ ನಡೆದ ಸೌಹಾರ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಹಕಾರ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿ, ಸಹಕಾರಿ ರಂಗ ಜನರ ಬದುಕಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಸಹಕಾರಿಯು ದುರ್ಬಲ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವದರ ಮೂಲಕ ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಸಫಲವಾಗಿದೆ ಎಂದರು.
ಸಹಕಾರ ಕ್ಷೇತ್ರ ಬಹಳ ವಿಸ್ತಾರವಾಗಿದೆ. ನಮ್ಮ ಸಹಕಾರಿ ಸಂಘದ ಬೆಳವಣಿಗೆಗೆ ಸಹಕರಿಸಿದ ಎಲ್ಲ ಗ್ರಾಹಕರಿಗೆ ಕೃತಜ್ಞತೆಗೆಳು. ಸಹಕಾರ ಕ್ಷೇತ್ರ ಚಳುವಳಿ ಪ್ರಾರಂಭವಾದ ಇತಿಹಾಸ, ಬೆಳವಣಿಗೆ ಮತ್ತು ಸಧ್ಯದ ಸ್ಥಿತಿ ಅವಲೋಕಿಸಿದಾಗ ಸಾಕಷ್ಟು ಬೆಳವಣಿಗೆ ಹಾಗೂ ಬದಲಾವಣೆ ಕಾಣಬಹುದು ಎಂದರು.
ನಿರ್ದೇಶಕ ಅನ್ವರಖಾನ ಬಾಗೇವಾಡಿ ಮಾತನಾಡಿದರು.
ನಿರ್ದೇಶಕರುಗಳಾದ ಎ.ಎಂ. ನಿಚ್ಚಣಕಿ, ಎ.ಆರ್. ಬಾಗೇವಾಡಿ, ಎ.ಎ.ಬಾಗೇವಾಡಿ, ಎಂ.ಕೆ. ಬಾಗವಾನ, ಎಂ.ಎಂ.ಖಾಜಿ, ಎಂ.ಎಂ. ಹುದಲಿ, ಹಸನಅಲಿ ಶೇಖ, ಆರ್.ಎ. ಬೇದ್ರೇಕರ, ಬಿ.ಡಿ. ದಾಸ್ತಿಕೊಪ್ಪ, ಚಂದ್ರು ಭೋವಿ, ಪುಂಡಲಿಕ ಮುನವಳ್ಳಿ, ಡಿ.ಕೆ. ಮುನವಳ್ಳಿ, ಎಫ್. ಎ. ತೇರಗಾಂವ, ಟಿ.ಎಸ್. ನದಾಫ್ ಹಾಗೂ ವ್ಯವಸ್ಥಾಪಕ ಎಫ್.ಎ. ಅಂಕಲಗಿ ಮತ್ತು ಸಿಬ್ಬಂದಿ ವರ್ಗ ಇದ್ದರು.