ಸೌಹಾರ್ದ ಸಹಕಾರಿ ದಿನಾಚರಣೆ: 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ

ಬೀದರ:ಜ.2:ನಗರದ ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಕಛೇರಿಯಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆ ಹಾಗೂ 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜರುಗಿತ್ತು. ಸಹಕಾರಿಯ ದ್ವಜಾರೋಹಣವನ್ನು ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀ ಗುರುನಾಥ ಜ್ಯಾಂತೀಕರ ನೇರವೆರಿಸಿದರು. ರಾಷ್ಟ್ರದಲ್ಲಿ ಯಾವುದಾದರು ವಿಷಯದ ಮೇಲೆ ಎರಡು ಶಾಸನಗಳು ಜಾರಿಯಲ್ಲಿದರೆ ಅದು ಕೇವಲ ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಎಂದು ನುಡಿದರು. ಸಹಕಾರ ಕಾಯ್ದೆಯು ಸ್ವತಂತ್ರ ಪೂರ್ವದಲ್ಲಿ 1904 ಬ್ರಿಟಿಷರು ಜಾರಿಗೆ ತಂದರುಕೂಡಾ ಅದು ಸಂಪೂರ್ಣ ಯಶಸ್ವಿಯಾಗಲ್ಲಿ ಈ ಹಿನ್ನಲೆಯಲ್ಲಿ ಸ್ವತಂತ್ರ ನಂತರ ಕೇಂದ್ರ ಸರ್ಕಾರವು ಸಹಕಾರಿ ಕ್ಷೇತ್ರದ ಬೆಳವಣಿಗೆ ಕುಂಠಿತಕ್ಕೆ ಕಾರಣ ಕಂಡುಹಿಡಿದು ಅತಿಯಾದ ಸರ್ಕಾರದ ಅಧೀಕಾರಿಗಳ ಮತ್ತು ರಾಜಕಾರಣಿಗಳ ಹಸ್ತಕ್ಷೇಪದಿಂದ ಮುಕ್ತವಾದಗ ಮಾತ್ರ ಸಹಕಾರಿ ಬೇಳವಣಿಗೆ ಸಾಧ್ಯವೆಂದು ತಿಳಿದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸ್ವಯತ ಕಾಯ್ದೆಯನ್ನು ಜಾರಿಗೊಳಿಸಿದರು. ಅದರ ಫಲವಾಗಿ ಇಂದು ಸೌಹಾರ್ದ ಸಹಕಾರಿ ಚಳುವಳಿ ಉದಯವಾಗಿ ಇಂದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದ ದಿನವಾಗಿದೆ ಎಂದು ನುಡಿದರು.
ಪ್ರಾಸ್ತವಿಕವಾಗಿ ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಉಪಾಧ್ಯಕ್ಷರು ಮಾತನಾಡಿ ಬೀದರ ಜಿಲ್ಲೆ ಸಹಕಾರಿಗಳ ತವರೂರು ದಿನೆ ದಿನೆ ಉತ್ತಮ ಸಹಕಾರಿಗಳು ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿವೆ ಅವುಗಳಿಗೆ ಬೆನ್ನೇಲುಬಾಗಿ ಜಿಲ್ಲಾ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ. ಸದರಿ ಸಾಲಿನಲ್ಲಿ ಕೋವಿಡ್ ಹಿನ್ನಲೆಯಲ್ಲಿ ಬೃಹತ ಪ್ರಮಾಣದ ಕಾರ್ಯಕ್ರಮ ಆಯೋಜಿಸದೆ ಸರಳ ರೀತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಪ್ರತಿ ವರ್ಷವು ಉತ್ತಮ ಸಹಕಾರಿ ಪ್ರಶಸ್ತಿ ನೀಡಲಾಗುತ್ತಿದೆ ಇದನ್ನು ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಶ್ರೀ ಕ್ರಾಂತೀಕುಮಾರ ಕುಲಾಲ್, ಹಿರಿಯ ಸಹಕಾರಿಗಳಾದ ಮಾಣಿಕಪ್ಪ ಗೋರನಾಳೆ, ಆನಂದ ಶಿವಯೋಗಿ, ಮಹಮ್ಮದ್ ಸೈಫ್, ಶ್ರೀರಂಗ ಕುಲಕರ್ಣಿ, ರಾಜಕುಮಾರ ಚಟ್ಟನ್ನಳಿ, ಸುನೀಲಕುಮಾರ ಗೌಳಿ, ಶಿವರಾಜ ಹೂಗಾರ, ಗಂಡೆರಾವ ಶಿವದೆ, ಸಂಗಶೆಟ್ಟಿ ಅಮೃತ ಹೋಸಮನಿ ಜಿಲ್ಲಾ ಸಂಯೋಜಕರಾದ ಶ್ರೀ ವೀರಶಟ್ಟಿ ಕಾಮಣ್ಣಾ ಉಪಸ್ಥಿತರಿದ್ದರು.