ಮಾನ್ವಿ,ಜು.೩೦-
ಸೌಹಾರ್ದ-ಭಾವೈಕ್ಯತೆಯ ಸಂಕೇತವಾಗಿ ಮಾನ್ವಿ ಪಟ್ಟಣ ಸೇರಿದಂತೆ ತಾಲೂಕಿನ ನೂರಾರು ಗ್ರಾಮದಲ್ಲಿ ಮುಸ್ಲಿಂ ಜನಾಂಗದವರ ಜೊತೆಗೆ ಹಿಂದೂಗಳು ಮೊಹರಂ ಹಬ್ಬ ಆಚರಿಸುತ್ತಿರುವುದು ವಿಶೇಷವಾಗಿತ್ತು, ಸರ್ವ ಧರ್ಮದ ಸಮುದಾಯದ ಜನರು ನೂರಾರು ಜನರು ತಮ್ಮ ಮನೆಯ ಹಾಗೂ ಊರಿನ ಪ್ರಮುಖ ಹಬ್ಬದಂತೆ ಮೊಹರಂ ಆಚರಿಸುತ್ತಾ ಬರುವ ಮೂಲಕ ಭಾವೈಕ್ಯ ಮೆರೆಯುತ್ತಿರುವ ಇತಿಹಾಸವನ್ನು ಹೊಂದಿದ್ದು ತುಂಬಾ ಖುಷಿಯ ವಿಚಾರವಾಗಿದೆ.
ಮೊಹರಂ ಹಬ್ಬದ ನಿಮಿತ್ತ ಮಾನ್ವಿ ಪಟ್ಟಣದ ಬೆಳಗಿನ ಪೇಟೆಯ ನೂರಾರು ಯುವಕರ ತಂಡದೊಂದಿಗೆ ಕೇಸರಿ ಶಾಲು ತೊಟ್ಟು ಕೋಲು ಕುಣಿತ ತೀರಿಸುವ ವಿಶಿಷ್ಟವಾದ ಆಚರಣೆ ಮಾನ್ವಿ ಪಟ್ಟಣದ ಟಿಪ್ಪುಸುಲ್ತಾನ ವೃತ್ತದಲ್ಲಿ ಜರುಗಿತು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.
ಅದೇ ರೀತಿ ಮಾನ್ವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಲಗೆ, ಕೋಲು ಕುಣಿತದೊಂದಿಗೆ ಮೆರವಣಿಗೆ ನೋಡಲು ಎರಡು ಕಣ್ಣುಗಳು ಸಾಲದಂತೆ ಹರಕೆ ಹೊತ್ತು ವಿಶೇಷ ಪೂಜೆಯ ಮೂಲಕ ಸಕ್ಕರೆ ನೀಡುತ್ತಿದ್ದರು, ಇದರಲ್ಲಿ ಭಾಗಿಯಾದ ನೂರಾರು ಮಕ್ಕಳು ಹಾಗೂ ಯುವಕರನ್ನು ನೋಡುವುದೇ ಒಂದು ಖುಷಿ. ಹಲಗೆ, ಡಿಜೆ, ಕೋಲಾಟಕ್ಕೆ ಜನರು ಸಖತ್ ಸ್ಟೆಪ್ ಹಾಕಿದ್ದಾರೆ, ಜನರ ಕೇಕೆ, ಸಿಳ್ಳೆ ಹೊಡೆಯುವುದು.
ಚುರುಮುರಿ ಎರಚುವುದನ್ನು ನೋಡಲು ತುಂಬಾ ಅದ್ಬುತವಾಗಿತ್ತು ಮೊಹರಂ ಹಬ್ಬದ ಕತ್ತಲು ರಾತ್ರಿ ದಿನದಂದು ಪಟ್ಟಣದ ತೆಕ್ಕದ ಸಿಟ್ಟಿನ ದೇವರ ಗುಡಿಯ ಮಸೀದಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಸೇನಿ ಹುಸೇನಿ ಕಟ್ಟೆಯ ಮುಂಭಾಗದ ಟಿಪ್ಪುಸುಲ್ತಾನ ವೃತ್ತದ ಮೂಲಕ ಅಂತ್ಯ ಸಂಸ್ಕಾರಕ್ಕಾಗಿ ದಿಡ್ಡಿ ಕೆರೆಯವರೆಗೆ ದೇವರುಗಳು ಮೆರವಣಿಗೆಯನ್ನು ನೂರಾರು ಭಕ್ತಾದಿಗಳು ನೆರೆದು ವೀಕ್ಷಣೆ ಮಾಡಿ ದೇವರ ಸಂಸ್ಕಾರದಲ್ಲಿ ಸಾಕ್ಷಿಯಾದರು.
ಪ್ರಮುಖವಾಗಿ ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುವ ಮೊಹರಂ ಹಬ್ಬವನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳು, ಸಮಾಜ ಮುಖಂಡರು, ಹಿಂದೂ ಭಕ್ತಾದಿಗಳು, ಸೇರಿದಂತೆ ಸಾವಿರಾರು ಜನರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.