ಸೌಲಭ್ಯ ವಿಸ್ತರಿಸಲು ಆಗ್ರಹ


ಧಾರವಾಡ ಜೂ.05-ರಾಜ್ಯದ ಮುಖ್ಯ ಮಂತ್ರಿಗಳು ಅನುದಾನರಹಿತ ಶಾಲಾ ಶಿಕ್ಷಕರಿಗೆ 5000 ರೂಪಾಯಿ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ವಿಷಯ ಮತ್ತುಅದಕ್ಕಾಗಿಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಎಂದುಕೆಪಿಸಿಸಿ, ಶಿಕ್ಷಕರು ಹಾಗೂ ಪದವೀದರರಘಟಕದಿಂದರಾಜ್ಯಾಧ್ಯಕ್ಷ ಡಾ.ಆರ್,ಎಂ,ಕುಬೇರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ಕೇವಲ ಶಾಲಾ-ಶಿಕ್ಷಕರು ಅಂತಾ ವರದಿಯಾಗಿದ್ದು, ಇದರಿಂದ ಪದವಿ-ಪೂರ್ವಕಾಲೇಜ್ ಹಾಗೂ ಪದವಿ ಕಾಲೇಜ್‍ನಉಪನ್ಯಾಸಕರನ್ನು ಈ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಇದು ಶುದ್ಧತಾರತಮ್ಯ.ಅದಕ್ಕಾಗಿ ನಾನು ಮುಖ್ಯ ಮಂತ್ರಿಯವರ ನಡೆಯನ್ನುಖಂಡಿಸುತ್ತೇನೆ. ಶಿಕ್ಷಕರಿಗೆ ಸಹಾಯ ಮಾಡುವ ಒಳ್ಳೆಯ ಉದ್ದೇಶವಿದ್ದಲ್ಲಿಅನುದಾನರಹಿತ ಶಾಲಾ-ಕಾಲೇಜ್ ಮತ್ತು ಪದವಿ ಹಾಗೂ ವಿಶ್ವವಿದ್ಯಾ ನಿಲಯದವರೆಗಿನಎಲ್ಲಾ ಶಿಕ್ಷಕರಿಗೂ ಈ ಆರ್ಥಿಕ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರಕ್ಕೆಆಗ್ರ ಪಡಿಸುತ್ತೇನೆ, ಎಂದು ಡಾ. ಕುಬೇರಪ್ಪ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅನುದಾನಿತ ಶಾಲಾ-ಕಾಲೇಜ್‍ಗಳಲ್ಲಿ ನಿವೃತ್ತಿಯಿಂದಖಾಲಿ ಇರುವ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವಎಲ್ಲಾತಾತ್ಕಾಲಿಕ ಶಿಕ್ಷಕರಿಗೂ ಈ ಸೌಲಭ್ಯವನ್ನ ವಿಸ್ತರಿಸಬೇಕೆಂದು ಡಾ. ಕುಬೇರಪ್ಪಒತ್ತಾಯ ಪಡಿಸಿದ್ದಾರೆ.