ಸೌಲಭ್ಯ ಪಡೆಯಬೇಕಾದರೆ ಆಸ್ತಿ ತೆರಿಗೆ ಕಟ್ಟಿ-ಮಾಮನಿ

ಸವದತ್ತಿ, ನ 14- ಪುರಸಭೆಯಿಂದ ಕುಡಿಯುವ ನೀರು ಸೇರಿದಂತೆ ಉಳಿದ ಸೌಲಭ್ಯಗಳನ್ನು ಪಡೆಯಬೇಕಾದರೆ ಪುರಸಭೆಗೆ ಕಟ್ಟಬೇಕಾದ ಆಸ್ತಿತೇರಿಗೆಯನ್ನು ಬೇಗನೆ ಕಟ್ಟಬೇಕು ಎಂದು ಶಾಸಕ ಹಾಗೂ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಪಟ್ಟಣದ ಪುರಸಭೆ ಸಭೆಯಲ್ಲಿ ಮಾತನಾಡಿದ ಅವರು, ವ್ಯಾಪಾರಿ ಮಳಿಗೆಗಳ ಬಾಡಿಗೆಯನ್ನು ಕೂಡಲೆ ವಸೂಲಿಮಾಡಬೇಕು. ಪಟ್ಟಣದಲ್ಲಿ ಹೊಸ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು ಮತ್ತು ಪಟ್ಟಣಕ್ಕೆ ಮಂಜುರಾಗಿರುವ ಮಾಸ್ಟರ್ ಪ್ಲಾನ್.ಕಾಮಗಾರಿಯು ಪ್ರಾರಂಭವಾಗಬೇಕು. ಕಾಯಿಪಲ್ಲೆ ಮಾರುಕಟ್ಟೆಯ ಕಾಮಗಾರಿಯು ಪ್ರಾರಂಭವಾಗಬೇಕು. ಅತೀ ಕಡಿಮೆ ಟೆಂಡರ ಹಾಕಿರುವ ಕಾಮಗಾರಿಗಳನ್ನು ರದ್ದುಪಡಿಸಿ ಪುನಃ ಟೆಂಡರ ಕರೆಯಬೇಕು. ಆ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪುರಸಭೆ ನೂತನ ಅಧ್ಯಕ್ಷರಾದ ರಾಜಶೇಖರ ವಿ ಕಾರದಗಿ, ಉಪಾದ್ಯಕ್ಷ ದೀಪಕ ನಾ ಜಾನ್ವೇಕರ, ಪುರಸಭೆಯ ಸರ್ವಸದಸ್ಯರು ಉಪಸ್ಥಿತರಿದ್ದರು.
ಸಭೆಯ ಪ್ರಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅದ್ಯಕ್ಷರಾದ ಶಿವಾನಂದ ಹೂಗಾರರವರು ಉಪಸಭಾದ್ಯಕ್ಷ ಆನಂದ ಮಾಮನಿಯವರನ್ನು ಸನ್ಮಾನಿಸಿ ಗೌರವಿಸಿದರು.