ಸೌಲಭ್ಯವಂಚಿತ ಕಲಾವಿದರಿಗೆ ಗುರುತಿಸಿ : ಎಂ.ಎಲ್ ಪಟೇಲ್

ಅಫಜಲಪುರ:ಜ.28: ಗಡಿನಾಡು ಕಲಾವಿದರು ಸರಕಾರದ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.ಹೀಗಾಗಿ ಸರಕಾರ ಕಲಾವಿದರಿಗೆ ಮಾಶಾಸನದಂತಹ ವಿವಿಧ ಸೌಲಭ್ಯ ಒದಗಿಸಿ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕೆಂದು ಅಫಜಲಪುರ ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್.ಪಟೇಲ್ ಬಳೂಂಡಗಿ ಸರಕಾರಕ್ಕೆ ಆಗ್ರಹಿಸಿದರು.

ಇತ್ತೀಚೆಗೆ ಮಹಾರಾಷ್ಟ್ರ ಜಿಲ್ಲೆ ಅಕ್ಕಲಕೋಟ ತಾಲೂಕಿನ ತೋಳನೂರ ಗ್ರಾಮದಲ್ಲಿ ಮಾಶಾಳ ವಲಯ ಕಸಾಪ ಮತ್ತು ಆತ್ಮಾ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಸಂಗೀತ ದಿಗ್ಗಜ ದಿ.ರಾಚಯ್ಯ ಮುಗಳಿಮಠ ಅವರ “ಸ್ವರಾಂಜಲಿ” ಸಂಗೀತ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಹುಟ್ಟುಕುರಡ ಸಂಗೀತ ಗಾರುಡಿಗ ರಾಚಯ್ಯ ಮುಗಳಿಮಠ ಅವರು ಮಹಾರಾಷ್ಟ್ರ ಕರ್ನಾಟಕ ರಾಜ್ಯಸೇರಿದಂತೆ ಅನೇಕ ಕಡೆ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಂಗೀತದಲ್ಲಿ ಹೆಸರು ಮಾಡಿ ಇನ್ನೊಬ್ಬ ಕಲಾವಿದರಿಗೆ ಮಾದರಿಯಾಗಿದ್ದಾರೆ.ಆದರೆ ಇಂತಹ ಹೆಸರಾಂತ ಕಲಾವಿದನಿಗೆ ಯಾವ ಸರಕಾರವೂ ಸಹಾಯ ಸಹಕಾರ ಸೌಲಭ್ಯ ನೀಡದಿರುವದು ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಎಷ್ಟೋ ಕಲಾವಿದರು ಸರಕಾರದ ಕನಿಷ್ಠ ಸೌಲಭ್ಯವಿಲ್ಲದೆ ಬೀದಿ ಪಾಲಾಗಿದ್ದಾರೆ.ಕೂಡಲೆ ಸರಕಾರ ಇಂತಹ ಕಲಾವಿದರನ್ನು ಗುರುತಿಸಿ ಅವರಿಗೆ ಸೌಲಭ್ಯ ಸಿಗುವಂತಹ ಕೆಲಸ ಮಾಡಬೇಕು.ಅಚ್ಚಕನ್ನಡ ಕವಿ,ಕಸಾಪ ಮಾಶಾಳ ವಲಯ ಅಧ್ಯಕ್ಷ ಬಾಬುಮೀಯಾ ಫುಲಾರಿ ಅವರು ವಿವಿಧ ಕಲಾವಿದರನ್ನು ಕರೆಸಿ ಗಡಿನಾಡಲ್ಲಿ ಇಂತಹ ಅದ್ಬುತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ.ತಾವೊಬ್ಬ ಕವಿಯಾಗಿ ಗಡಿನಾಡಲ್ಲಿ ಕಲಾವಿದರನ್ನು ಕರೆಸಿ ಅವರನ್ನು ಗುರುತಿಸಿ ಪ್ರಶಸ್ತಿ ಪತ್ರದೊಂದಿಗೆ ಗೌರವಿಸುವಂತಹ ಮಹತ್ಕಾರ್ಯ ಮಾಡಿದ್ದಾರೆ.ಅವರಿಗೆ ಯಾವತ್ತೂ ನಮ್ಮ ಸಹಾಯ ಸಹಕಾರವಿರುತ್ತದೆ ಎಂದು ಹೇಳಿದರು.

ಗಾನಗಂಧರ್ವ, ಮಹಾನ್ ಗವಾಯಿ ದಿ.ರಾಚಯ್ಯ ಮುಗಳಿಮಠ ಅವರು ಶಾರೀರಿಕವಾಗಿವಿಲ್ಲದ್ದರೂ ಅವರಲ್ಲಿ ಅಡಗಿರುವ ಅದ್ಬುತ ಸಂಗೀತ ನಮ್ಮೆಲ್ಲರ ಕಿವಿಯಲ್ಲಿದೆ.ಹೀಗಾಗಿ ಅವರು ನಮ್ಮಿಂದ ಶಾರೀರಿಕವಾಗಿ ದೂರವಾಗಿದ್ದಿರಬಹುದು ಆದರೆ ಇಂತಹ ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅವರ ನೆನೆಪಾಗುತ್ತದೆ.ಯಾಕೆಂದರೆ ಅವರಲ್ಲಿ ಅಡಗಿರುವ ಕಲೆ ನಮಗೆ ನೆನಪು ಮಾಡಿಸುತ್ತದೆ.

ಪಾಂಡುರಂಗ ಮಹಾರಾಜ ಜೇವೂರ

ಗಡಿನಾಡಲ್ಲಿ ಕನ್ನಡ ನೆಲ,ಜಲ,ಭಾಷೆಗಾಗಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ಹೋರಾಟ ಮಾಡುತ್ತ ಬಂದಿದೆ.ಮೇಲಾಗಿ ಈ ಭಾಗದ ಕವಿ ಮಾಶಾಳ ಕಸಾಪ ವಲಯ ಅಧ್ಯಕ್ಷ ಬಾಬುಮೀಯಾ ಫುಲಾರಿ ಅವರು ನಮ್ಮ ಕಸಾಪ ಆಶ್ರಯದಲ್ಲಿ ಯಾವತ್ತೂ ಒಂದಿಲ್ಲೋಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆಸುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.ಹೀಗೆ ಯಾವತ್ತೂ ಅವರ ಕಾರ್ಯ ಮುಂದುವರೆಯಲಿ.ಅವರಿಗೆ ನಮ್ಮ ಸಹಾಯ ಸಹಕಾರವಿರುತ್ತದೆ.

ಡಿ.ಎಂ.ನದಾಫ್

ಅಧ್ಯಕ್ಷರು ಕಸಾಪ ಅಫಜಲಪುರ

ಗಡಿನಾಡು ಕಲಾವಿದರನ್ನು ಹುಡುಕಿ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಈ ಭಾಗದ ಕಸಾಪ ವಲಯ ಅಧ್ಯಕ್ಷ ಬಾಬುಮೀಯ ಫುಲಾರಿ ಮಾಡುತ್ತಿದ್ದಾರೆ.ಮತ್ತು ಅಷ್ಟೇ ಅಲ್ಲ ಕನ್ನಡ ನೆಲ,ಜಲ,ಭಾಷೆಗಾಗಿ ಯಾವತ್ತೂ ಹೋರಾಟ ಮಾಡುವ ಶ್ರಮಜೀವಿಯಾಗಿದ್ದಾರೆ.

ಈರಣ್ಣ ಎಂ.ವಗ್ಗೆ

ಅಧ್ಯಕ್ಷರು ತಾಲೂಕಾ ಪತ್ರಕರ್ತರ ಸಂಘ ಅಫಜಲಪುರ

ಈ ಸಂದರ್ಭದಲ್ಲಿ ಎಲ್ಲಾ ಸಂಗೀತ ಕಲಾವಿದರನ್ನು ವಕೀಲ ಸಂಘದ ಅಧ್ಯಕ್ಷ ಎಂ.ಎಲ್.ಪಟೇಲ್ ಬಳೂಂಡಗಿ ಪ್ರಶಸ್ತಿ ಪತ್ರಗಳನ್ನು ನೀಡಿ ಸತ್ಕರಿಸಿದರು.

ಗೌರ್ (ಬಿ) ಕೈಲಾಸಲಿಂಗ ಶಿವಾಚಾರ್ಯರು,ಜೇವೂರ ಪಾಂಡುರಂಗ ಮಹಾರಾಜರು ಸಾನಿಧ್ಯವಹಿದರು.

ಉದ್ಯಮಿ,ಯುವ ಮುಖಂಡ ವೈಜನಾಥ ನಿಂಗದಳ್ಳಿ ಜ್ಯೋತಿ ಬೆಳಗಿಸಿದರು.

ಕಾರ್ಯಕ್ರಮ ಆಯೋಜಕ ಬಾಬುಮಿಯಾ ಫುಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸೋಮಶೇಖರ ಜಮಶೆಟ್ಟಿ,ರಮೇಶ ಉಪ್ಪಿನ್,ಕಲ್ಯಾಣಿ ದೇಶಟ್ಟಿ,ಸಂಜಯಕುಮಾರ ಹೊರಕೇರಿ,ಸಂಗಮೇಶ ಪಾಟೀಲ್,ಶ್ರೀಶೈಲ್ ರಬ್ಬಾ ಸೇರಿದಂತೆ ಇತರರು ಇದ್ದರು.

ಶರಣಪ್ಪ ಫುಲಾರಿ ಸ್ವಾಗತಿಸಿದರೆ,ಗುಂಡುರಾವ ಪೊದ್ದಾರ್ ವಂದಿಸಿದರು.ಶಿಕ್ಷಕ ಹುಸೇನಿ ಮುಜಾವರ್ ಹೈದ್ರಾ ನಿರೂಪಿಸಿದರ.