ಸೌಲಭ್ಯದ ಸದುಪಯೋಗಕ್ಕೆ ಕರೆ

ಹಾವೇರಿ,ಮೇ19 : ಸರ್ಕಾರದಿಂದ ವಿಕಲಚೇತನರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪಾಲಕರು ಆ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಅವರಿಗಾಗಿಯೇ ಕಾಲಜಿವಹಿಸಿ ಬಳಸುವಂತಾಗಲಿ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಹೇಳಿದರು. ನಗರದ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿನ ಡಿ.ಡಿ.ಆರ್.ಸಿ ಕಛೇರಿಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಹಾವೇರಿ ಮತ್ತು ಕಂಪೆÇಸಿಟ್ ರೀಜನಲ್ ಸೆಂಟರ್ ದಾವರಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಬುದ್ದಿಮಾಂಧ್ಯ ವಿಕಲಚೇತನರಿಗೆ ಟಿ.ಎಲ್.ಎಂ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು. ಬುದ್ದಿಮಾಂಧ್ಯ ವಿಕಲಚೇತನರಿಗೆ ಸರ್ಕಾರ ವತಿಯಿಂದ ಟಿ.ಎಲ್.ಎಂ ಕಿಟನ್ನು ರೆಡ್ ಕ್ರಾಸ್ ಸಂಯೋಗದಲ್ಲಿ ಡಿಡಿಆರ್ಸಿ ಮತ್ತು ಜಿಲ್ಲಾ ವಿಕಲಚೇತನರ ಇಲಾಖೆ ಉಚಿತವಾಗಿ ನೀಡಲಾಗುತ್ತಿದೆ. ಉಚಿತವಾಗಿರುವ ಸೌಲಭ್ಯಗಳನ್ನು ಒದಗಿಸಿ ಅವರು ಸದುಪಯೋಗಪಡಿಸಿಕೊಳ್ಳಲು ನಾವೆಲ್ಲರೂ ಶ್ರಮಿಸೋಣ ಎಂದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿಗಳಾದ ಆಶು ನದಾಫ ಮಾತನಾಡಿ ನಿಮ್ಮ ಏಳಿಗೆಗಾಗಿಯೇ ನಮ್ಮ ಇಲಾಖೆ ಇರುತ್ತದೆ. ಗ್ರಾಮ ಮಟ್ಟದಲ್ಲಿಯೂ ನಮ್ಮ ಪ್ರತಿನಿಧಿಗಳು ನಿಮ್ಮ ಕೆಲಸ ಮಾಡಲು ಸಹಕಾರ ನೀಡುತ್ತಾರೆ. ಸರ್ಕಾರದ ಸೌಲಭ್ಯ ಪಡೆಯಲು ಬೇಕಾದ ದಾಖಲಾತಿಗಳನ್ನು ಸರಿಪಡಿಸಿಕೊಂಡು ಸೌಲಭ್ಯಗಳನ್ನು ಪಡೆಯಿರಿ ಎಂದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಪಿ ಆರ್ ಹಾವನೂರ ಮಾತನಾಡಿ ಪಾಲಕರು ಮಕ್ಕಳನ್ನು ಮತ್ತೊಬ್ಬ ಮಕ್ಕಳಿಗೆ ಹೊಲಿಕೆ ಮಾಡಬಾರದು. ಪ್ರತಿಯೊಬ್ಬ ಮಗುವೂ ಅದ್ವಿತೀಯ ಆಗಿರುತ್ತದೆ. ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿದೆ ಎಂದರು. ಸಿ.ಆರ್.ಸಿ ಮೇಲ್ವಚಾರಕರಾದ ಸುರೇಶಚಂದ್ರ ಕೇಸರ ಅವರು ಕಿಟ್ ಹೇಗೆ ಬಳಸಬೇಕು ಎಂಬ ಮಾಹಿತಿಯನ್ನು ಪ್ರಾಯೋಗಿಕವಾಗಿ ಮಾಡಿತೋರಿಸುವ ಮೂಲಕ ತಿಳಿಸಿ ಹೇಳಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಪ್ರದೀಪ ದೊಡ್ಡಗೌಡ್ರ, ಖಜಾಂಚಿ, ಪ್ರಭು ಹಿಟ್ನಳ್ಳಿ, ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ನಿರ್ಧೇಶಕರಾದ ರವಿ ಹಿಂಚಿಗೇರಿ, ಡಾ.ನೀಲೇಶ, ಉಡಚಪ್ಪ ಮಾಳಗಿ, ಡಿಇಐಸಿ ಮ್ಯಾನೇಜರ ಮಹಾಂತೇಶ, ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಡಾ. ಅಂಕಿತ ಆನಂದ, ಇರ್ಶಾದಲಿ ದುಂಡಸಿ, ಜಗದೀಶ ಬೇಟಗೇರಿ, ಫಕ್ಕಿರೇಶ ಬಾರಕೇರ ಸೇರಿದಂತೆ ಅಧಿಕಾರಿಗಳು, ಎಂಆರ್ಡಬ್ಲೋ, ವ್ಹಿಆರ್ಡಬ್ಲೋ,ಯುಆರ್ಡಬ್ಲೋ, ಪಲಾನುಭವಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.