ಸೌಲಭ್ಯಗಳ ಕೊರತೆ ಮಧ್ಯೆ ಉತ್ತಮ ಅಂಕಗಳಿಗೆ ಶ್ಲಾಘನೀಯ:ಸುರೇಶ ಲೇಂಗಟಿ

ಕಲಬುರಗಿ, ಮೇ,14: ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯಗಳ ಕೊರತೆಯ ಮಧ್ಯೆ ಉತ್ತಮ ಅಂಕಗಳಿಸುದು ಸವಾಲಿನ ದಾರಿಯಾಗಿದೆ, ಈ ಮಧ್ಯೆ ಹೆಚ್ಚು ಅಂಕ ಪಡೆದಿದ್ದು ಶ್ಲಾಘನೀಯ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ನ್ಯೂ ಪಾಪುಲರ್ ಪ್ರೌಢಶಾಲೆಯಲ್ಲಿ ಸೋಮವಾರ 10 ನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಶ್ರಮದ ಮೂಲಕ ಉತ್ತಮ ಸಾಧನೆ ಮಾಡಬೇಕು, ಕಡಿಮೆ ಅಂಕ ಪಡೆದವರು ಎದೆಗುಂದುವ ಅಗತ್ಯವಿಲ್ಲ, ತಪ್ಪನ್ನು ತಿದ್ದಿಕೊಂಡು ಹೆಚ್ಚಿನ ಪ್ರಯತ್ನದ ಮೂಲಕ ಗುರಿ ಸಾಧನೆಗೆ ಮುಂದಾಗಬೇಕು , ನೀವು ಎಂತಹ ಉನ್ನತ ಸ್ಥಾನಕ್ಕೆರಿದರೂ ಪ್ರತಿ ನಿತ್ಯ ಕನ್ನಡ ಮಾತನಾಡುವ ಮೂಲಕ ಭಾಷೆ ಉಳಿಸಿ ಬೆಳೆಸುವ ಸಹಕರಿಸಬೇಕು ಎಂದರು.ಇದೇ ಸಂದರ್ಭದಲ್ಲಿ 2024 ನೇ ಸಾಲಿನ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಪೆÇ್ರೀತ್ಸಾಹಿಸಲಾಯಿತು. ಮಹಾಗಾಂವ ಕ್ರಾಸ್ ನಲ್ಲಿರುವ ನ್ಯೂ ಪಾಪುಲರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಜೀಮ್ ಬೇಗ್, ಮಾಜಿ ಕೆಡಿಪಿ ಸದಸ್ಯ ಮಜರ್ ಅಲಿ ದರ್ಜಿ, ಶಾಲೆಯ ಆಡಳಿತಾಧಿಕಾರಿ ದೌಲಪ್ಪ ಆನಂದಿ, ಆನಂದ ತೆಗನೂರ ಇತರರು ಇದ್ದರು.