ಸೌರಾಷ್ಟ್ರ ಸೋಮನಾಥ ಕ್ಷೇತ್ರದಲ್ಲಿ ಮೌನಾನುಷ್ಠಾನ

ಕಲಬುರಗಿ,ಆ 22: ಅಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಗದಗೇಶ್ವರ ಹಿರೇಮಠದ ಪೀಠಾಧಿಪತಿ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಶ್ರಾವಣ ಮಾಸದ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ಗುಜರಾತ್ ರಾಜ್ಯದಲ್ಲಿ ಬರುವ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೇಯದಾದ ಸೌರಾಷ್ಟ್ರ ಸೋಮನಾಥ ಕ್ಷೇತ್ರದಲ್ಲಿ 1 ತಿಂಗಳು ಮೌನಾನುಷ್ಠಾನ ಕೈಗೊಂಡಿದ್ದಾರೆ.
ಆಗಸ್ಟ್ 16 ರಿಂದ ಆರಂಭವಾದ ಮೌನಾನುಷ್ಠಾನ ಸಪ್ಟೆಂಬರ್ 15 ರವರೆಗೆ ನಡೆಯಲಿದೆ.ಕಾರಣ ಸಕಲ ಸದ್ಭಕ್ತರು ಸೋಮನಾಥೇಶ್ವರರ ಮತ್ತು ಗುರುಗಳ ದರ್ಶನ ಪಡೆದು ಪುನೀತರಾಗುವಂತೆ ನಿಂಬರ್ಗಾದ ಗದಗೇಶ್ವರ ಭಜನಾ ಮಂಡಳಿಯವರು ಕೋರಿದ್ದಾರೆ