ಸೌರವ್ ಗಂಗೂಲಿಗೆ ಸೂಕ್ತ ಚಿಕಿತ್ಸೆ

ಕೊಲ್ಕತ್ತಾ ಜನವರಿ ೪. ಅನಾರೋಗ್ಯ ಪೀಡಿತರಾಗಿ ಕೊಲ್ಕತದ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮುಂದಿನ ಚಿಕಿತ್ಸೆ ನೀಡುವ ಕುರಿತು ಅವರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ವೈದ್ಯಕೀಯ ಮಂಡಳಿ ತೀರ್ಮಾನಿಸಿದೆ .

ಗಂಗೂಲಿ ಅವರ ಆರೋಗ್ಯ ಕುರಿತು ಆಸ್ಪತ್ರೆಯ ವೈದ್ಯರು ನಿಗಾವಹಿಸಿದ್ದಾರೆ ಹಾಗೂ ಕಾಲಕಾಲಕ್ಕೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ವರದಿ ತಿಳಿಸಿದೆ.

ಹೃದಯ ಸಂಬಂಧಿ ಸಮಸ್ಯೆ ಹಾಗೂ ವಾಂತಿ ಮತ್ತಿತರ ಸಮಸ್ಯೆಗಳಿಂದಾಗಿ ಗಂಗೂಲಿ ಅವರನ್ನು ಶನಿವಾರ ಆಸ್ಪತ್ರೆಗೆ ಸೇರಿಸಲಾಗಿತ್ತು.

ಶನಿವಾರ ಬೆಳಿಗ್ಗೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆ ವೈದ್ಯರು ಅವರಿಗೆ ಕೋರೋನ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು.