ಸೌರಭ ದಾಸ ಸಾಹಿತ್ಯ ಪರೀಕ್ಷೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.10: ನಗರ ಸತ್ಯನಾರಾಯಣಪೇಟೆಯ ಉತ್ತರಾಧಿ ಮಠದಲ್ಲಿ ವಿಶ್ವ ಮಧ್ವ ಮಹಾಪರಿಷತ್ ನ  ಅಂಗ ಸಂಸ್ಥೆಯಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯವು  ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಉದ್ಘಾಟನೆಯಾದ  ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಆಶ್ರಯದಲ್ಲಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವಿದ್ಯಾಲಯದಲ್ಲಿ ವಯಸ್ಸಿನ ಮಿತಿ ಇಲ್ಲದೆ ಅತ್ಯಂತ  ಉತ್ಸುಕರಾಗಿ, ಅನೇಕ ಕೆಲಸದ ಒತ್ತಡವಿದ್ದರೂ ಕೂಡ ದಾಸರ ಅನೇಕ ಚರಿತ್ರೆಗಳನ್ನು, ಕೀರ್ತನೆಗಳು ಮತ್ತು ಹರಿಕಥಾಮೃತಸಾರದ ಅರ್ಥಾನು ಸಂಧಾನ ಐದು ವರ್ಷದವರೆಗೆ ಅಧ್ಯಯನ ಮಾಡಿ ಪ್ರತಿ ವರ್ಷ ಆರು ತಿಂಗಳಿಗೆ ಒಮ್ಮೆ ಮಹಿಳೆಯರಿಗೆ ಪರೀಕ್ಷೆಯನ್ನು ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ದಾಸ ದಾಸ, ಶ್ರೀ ದಾಸ ನಿಧಿ, ದಾಸರತ್ನ ದಾಸ ಶಿರೋಮಣಿ ಐದು ವರ್ಗವಿದೆ, ದೊಡ್ಡ ಸಾಧನೆ ಮಾರ್ಗದಲ್ಲಿ  ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ಉದ್ಘಾಟಿಸಿದ ವಿದ್ಯಾಲಯದಲ್ಲಿ ಎಲ್ಲ ಮಹಿಳೆಯರು ಮತ್ತು ಪುರುಷ ರ ಸಾಧನ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದಾರೆ, 
ಅಂತಹ ಸೌರಭ ದಾಸ ಸಾಹಿತ್ಯ ವಿದ್ಯಾಲಯದಿಂದ ಬಳ್ಳಾರಿ ನಗರದ  ಉತ್ತರಾದಿ ಮಠದಲ್ಲಿ ದಾಸ, ದಾಸ ಶ್ರೀ, ದಾಸ ನಿಧಿ ,ದಾಸರತ್ನ ,ದಾಸ ಶಿರೋಮಣಿ, 5 ವರ್ಗದ ಪರೀಕ್ಷೆಗಳು ನಡೆದವು. ಜ. 7 ಮತ್ತು ಜ.8ರಂದು ಎರಡು ದಿನಗಳ ಕಾಲ ನಡೆದವು.
ಪಾಠಕರಾದ ಪಂ. ಜಿತೇಂದ್ರ ಆಚಾರ್ಯ, ಸಂಚಾಲಕರಾದ  ಸೌಭಾಗ್ಯ ಕವಿ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.