ಸೌರಭ್, ಅತಿಶಿ ಪ್ರಮಾಣ ವಚನ

ನವದೆಹಲಿ,ಮಾ.೯- ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸಂಪುಟಕ್ಕೆ ಇಂದು ನೂತನ ಸಚಿವರಾಗಿ ಸೌರಭ್ ಭಾರದ್ವಾಜ್, ಅತಿಶಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
ಫೆಬ್ರವರಿ ೨೮ ರಂದು ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ರಾಜೀನಾಮೆ ನೀಡಿದ ಒಂದು ದಿನದ ನಂತರ, ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ ೧ ರಂದು ಸಂಪುಟಕ್ಕೆ ಇಬ್ಬರನ್ನು ನೇಮಕ ಮಾಡಲು ಹೊಸ ಸಚಿವರ ಹೆಸರನ್ನು ಲೆಪ್ಟಿಂನೆಂಟ್ ಗವರ್ನರ್ ಶಿಫಾರಸ್ಸು ಮಾಡಿದ್ದರು.
ಅವರು ಆ ಶಿಪಾರಸ್ಸನ್ನು ರಾಷ್ಟ್ರಪತಿಗಳಿಗೆ ಕಳುಹುಸಿದ್ದರು. ರಾಷ್ಟ್ರಪತಿ ಅಂಗೀಕರಿಸಿ ಮತ್ತೆ ರಾಜ್ಯಪಾಲರಿಗೆ ಕಳುಹಿಸಿದ್ದರು.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಅವರು ರಾಜ್ ನಿವಾಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ಸಾರೆ.
ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ಬಂಧನ ಮತ್ತು ನಂತರದ ರಾಜೀನಾಮೆ ನಂತರ ಖಾಲಿಯಾದ ಸ್ಥಾನಗಳನ್ನು ಹೊಸ ಸಚಿವರು ತುಂಬಲಿದ್ದಾರೆ.
೨೦೨೧-೨೨ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ ಬಂಧಿಸಿದೆ, ಜೈನ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ಭಾರದ್ವಾಜ್ ಮತ್ತು ಅತಿಶಿ ಸೇರ್ಪಡೆಗೆ ರಾಷ್ಟ್ರಪತಿ ನಿನ್ನೆ ಅನುಮೋದನೆ ನೀಡಿದ್ದರು.
ಸೌರಭ್ ಭಾರದ್ವಾಜ್ ದೆಹಲಿ ಜಲ ಮಂಡಳಿ ಉಪಾಧ್ಯಕ್ಷ, ಗ್ರೇಟರ್ ಕೈಲಾಶ್‌ನಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಅವರು ೨೦೧೩ ರಲ್ಲಿ ಸರ್ಕಾರದಲ್ಲಿ ಏಪೊ ಯ ಸಂಕ್ಷಿಪ್ತ ಮೊದಲ ಅವಧಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು.