ಸೌಭಾಗ್ಯವತಿ ದೇವರು ನಿಧನ

ಹಿರಿಯೂರು.ಡಿ.23: ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಮತಿ ಎಂ.ಎನ್.ಸೌಭಾಗ್ಯವತಿ ದೇವರು (85) ಇವರು ಮಂಗಳವಾರ ಸಂಜೆ 5.30ರ ಸಮಯದಲ್ಲಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿರುತ್ತಾರೆ.  ಅಪಾರ ಬಂಧುವರ್ಗವನ್ನು ಇವರು ಅಗಲಿದ್ದಾರೆ. ಇಂದು ಮದ್ಯಾಹ್ನ ನಗರದ ವೀರಶೈವ ಮುಕ್ತಿಧಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು. ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿದ್ದು ಥಿಯಾಸಫಿಕಲ್ ಸೊಸೈಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು ಇವರ ನಿಧನಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.