ಸೌದಿಯಲ್ಲಿ ಅಪಘಾತ:ಮೃತ ಕುಟುಂಬಸ್ಥರಿಗೆ ಸಾಂತ್ವನ

ಕಲಬುರಗಿ;ಫೆ.25: ಸೌದಿ ಅರೇಬಿಯಾದ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ಸು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಕಲಬುರಗಿಯ ನೂರ್ ಬಾಗ್ ನಿವಾಸಿ ಮುಹಮ್ಮದ್ ಝೈನುದ್ದೀನ್ ಸಾಹೇಬ್ ಅವರು ಮೃತಪಟ್ಟಿದರು ಅವರ ನಿವಾಸಕ್ಕೆ ಹಜ್ ತರಬೇತಿ ಕ್ಯಾಂಫ್ ಸದಸ್ಯರು ತೆರಳಿ ಕುಟುಂಬದ ಸದಸ್ಯರಿಗೆ ಸಾತ್ವಾನ ಹೇಳಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಹಜ್ ತರಬೇತಿ ಕ್ಯಾಂಫ್ ಅಧ್ಯಕ್ಷ ಸೈಯದ್ ಮಜರ ಹುಸೇನ್, ಉಪಾಧ್ಯಕ್ಷ ಅಶ್ವಕ ಅಹ್ಮದ ಚುಲಬುಲ್, ಕಾರ್ಯದರ್ಶಿ ಸೈಯದ್ ಜಾಫರ್ ಹುಸೇನ್, ಸಹ ಕಾರ್ಯದರ್ಶಿ ಸೈಯದ್ ಝಾಕಿರ್ ಹುಸೇನ್, ಸದಸ್ಯರಾದ ಅಬ್ದುಲ್ ಸತ್ತಾರ, ಮೋಹ್ಮದ್ ಅಲಿಮೋದ್ದಿನ್, ರಶೀದ ಮಾಮು, ಚಾಂದ ಪಾಶಾ, ಅಬ್ದುಲ್ ಗಪೂರ, ಅಬ್ದುಲ್ ಖಾಧರ್, ಜಿಲ್ಲಾನಿ, ಜಾವಿದಖಾನ್, ಹಾಜಿ ಎ.ಜಬ್ಬಾರ್, ಶೇಖ ಮೈನೋದ್ದಿನ್, (ಇಮಾಮ) ಖಾಸಿ ಮೋಲಸಾಬ್ ಬುಕ್ಕಾರಿ ಇದ್ದರು.