
“ಫಸ್ಟ್ ರ್ಯಾಂಕ್ ರಾಜು”, “ರಾಜು ಕನ್ನಡ ಮೀಡಿಯಂ” ಚಿತ್ರಗಳ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನರೇಶ್ ಕುಮಾರ್, ಇದೀಗ “ಸೌಥ್ ಇಂಡಿಯನ್ ಹೀರೋ” ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.
ನಿರ್ದೇಶಕರಿಗೆ ವಿಶೇಷ ಪ್ರದರ್ಶನ ಹಾಕಿಮೆಚ್ಚುಗೆ ಪಡೆದಿದ್ದಾರೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ತೆಲುಗು,ತಮಿಳು ಮತ್ತು ಮಲೆಯಾಂನಲ್ಲಿರುವ ಸಿನಿ ರಸಿಕರು ತಮ್ಮದೇ ಖರ್ಚು ವೆಚ್ಚದಲ್ಲಿ ಬಸ್ ಮಾಡಿಕೊಂಡು ಬೆಂಗಳೂರಿಗೆ ಬಂದು ಸಿನಿಮಾ ನೋಡಿರುವುದು ಕನ್ನಡ ಚಿತ್ರರಂಗ ಮಟ್ಟಿಗೆ ಹೆಗ್ಗಳಿಕೆಯೇ ಸರಿ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ನರೇಶ್ ಕುಮಾರ್, ಒಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕನ್ನಡದ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು. ಒಂದೆರಡು ವಾರ ಆಗಲಿ ಆಮೇಲೆ ಚಿತ್ರ ನೋಡೋಣ ಎನ್ನುವ ಮನಸ್ಥಿತಿ ಬದಲಾಯಿಸಿಕೊಳ್ಳಿ ಒಳ್ಳೆ ಚಿತ್ರ ಮಾಡಿದ್ದೇವೆ. ಚಿತ್ರಮಂದಿರಕ್ಕೆ ಬನ್ನಿ. ಚಿತ್ರ ಮನಸ್ಸಿಗೆ ಮುದ ನೀಡಲಿದೆ ಎಂದಿದ್ದಾರೆ.
ಕನ್ನಡದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಹೊಸ ನಾಯಕನ ಉದಯವಾಗುತ್ತಿದೆ. ಇದೀಗ ನಮ್ಮ ಚಿತ್ರದ ಮೂಲಕ ಸಾರ್ಥಕ್ ಕನ್ನಡ ಚಿತ್ರರಂಗದಲ್ಲಿ ಉದಯಿಸಿದ್ದಾರೆ.ಅದರಲ್ಲಿಯೂ ಕೊರೊನಾ ನಂತರದ ಬೆಳವಣಿಗೆ ಖುಷಿಯ ವಿಚಾರ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ 80ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಈ ವಾರವೂ ಹೆಚ್ಚಾಗುವ ನಿರೀಕ್ಷೆ ಇದೆ. ನಾಯಕ ಸಾರ್ಥಕ್ ಪಾತ್ರ ನೋಡಿ ನಟ ಉಪೇಂದ್ರ ಅವರು ಅಸೂಯೆ ಆಗುತ್ತದೆ ಎಂದಿದ್ದರು. ಅಲ್ಲದೆ ಚಿತ್ರ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ.ಇದಕ್ಕಿಂತ ಹೆಚ್ಚು ಶಹಬ್ಬಾಸ್‍ಗಿರಿ ಇನ್ನೇನು ಬೇಕು. ನಾಯಕಿ ಕಾಶಿಮಾ ಮುಂಬೈ ಬೆಡಗಿ ಊರ್ವಶಿ ಪಾತ್ರಕ್ಕೆ ಜೀವತುಂಬಿದ್ಧಾರೆ.ಅದೇ ರೀತಿ ಎಲ್ಲ ಕಲಾವಿದರೂ ಕೂಡ ಎಂದರು.
ನಿರ್ಮಾಪಕಿ ಶಿಲ್ಪಾ, ಹೊಸಬರಿಗೆ ಹೆಚ್ಚು ಚಿತ್ರ ಮಾಡಲಿ, ನಾಯಕ,ನಾಯಕಿಯರು ಬೆಳಯಲಿ ಎಂದರೆ ನಾಯಕ ಸಾರ್ಥಕ್, ನಾಯಕಿ ಕಾಶಿಮಾ ಸೇರಿ ಇಡೀ ತಂಡ ಖುಷಿ ಹಂಚಿಕೊಂಡಿತು.