ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಫೆ. 8 ರಿಂದ ‘ಕಲ್ಯಾಣ ಕರ್ನಾಟಕ ಜಾಂಬೊರೇಟ್: ಡಾ.ಖದಿರ್

ಬೀದರ್:ಜ.27: ಕಲ್ಯಾಣ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ಫೆ. 8 ರಿಂದ 12 ರ ವರೆಗೆ ಜಾಂಬೊರೇಟ್ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಉಪಾಧ್ಯಕ್ಷ ಡಾ. ಅಬ್ದುಲ್ ಖದಿರ್ ತಿಳಿಸಿದರು
ಈ ಕುರಿತು ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಮೂರು ಸಾವಿರಕ್ಕೂ ಹೆಚ್ಚು ಸೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಸೌಟ್ಸ್ ಅಂಡ್ ಗೈಡ್ಸ್ ಮುಖ್ಯಸ್ಥರು ಜಾಂಬೊರೇಟ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6.30 ರಿಂದ ರಾತ್ರಿ 8 ರ ವರೆಗೆ ಸಾಹಸಮಯ, ಸಾಂಸ್ಕøತಿಕ ಚಟುವಟಿಕೆ. ಯೋಗ, ಧ್ಯಾನ, ಜಾಥಾ, ಪಥ ಸಂಚಲನ, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಜಿಲ್ಲೆಯ ಜಾತ್ರೆಗಳ > ಸನ್ನಿವೇಶ ಪ್ರದರ್ಶನ, ಜಿಲ್ಲಾ ವೈಭವ, ದೈಹಿಕ ಶಿಕ್ಷಣದ ಪ್ರದರ್ಶನ, ಲೋಕಲ್ ಟ್ಯಾಲೆಂಟ್ ಶೋ ಮೊದಲಾದ ಚಟುವಟಿಕೆಗಳು ನಡೆಯಲಿವೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಡಾ ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ, ಈ ಕಲ್ಯಾಣ ಕರ್ನಾಟಕ ಜಾಂಬೋರೇಟ್ ಭಾರತ್ ಸೈಟ್ಸ್ ` ಮತ್ತು ಗೈಡ್ಸ್ ಕರ್ನಾಟಕ ರಾಜ್ಯದ ಪ್ರಧಾನ ಆಯುಕ್ತರಾದಂತಹ ಶ್ರೀ.ಪಿ.ಜಿ.ಆರ್.ಸಿಂಧ್ಯಾ ಅವರ ನೆತೃತ್ವದಲ್ಲಿ ನಡೆಯಲಿದೆ.
ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ ಜಾಂಬೊರೇಟ್ ಉದ್ಘಾಟಿಸುವರು ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.
ಭೋಸರಾಜು, ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಅರವಿಂದಕುಮಾರ ಅರಳಿ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಸೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸುವರು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಲ್ಯಾಣ ಕರ್ನಾಟಕ ವಿಭಾಗದ ಸಂಯೋಜಕಿ ಮಲ್ಲೇಶ್ವರಿ ಜುಜಾರೆ ಮಾತನಾಡಿ, ಮೆಹಂದಿ, ರಂಗೋಲಿ, ಪೇಪರ್ ಕಟ್ಟಿಂಗ್. ಕೈಮಾಡಲಿಂಗ್. ಪಯೋನಿರಿಂಗ್ ಮಾಡೆಲ್ಸ್, ಬೆಂಕಿ ಇಲ್ಲದೇ ಅಡುಗೆ ತಯಾರಿಕೆ. ತರಕಾರಿ ಮಾದರಿ, ರಸಪ್ರಶ್ನೆ ಸ್ಪರ್ಧೆ, ಸೋಲಾರ್ ತಂತ್ರಜ್ಞಾನ. • ಅಗ್ನಿ ಸುರಕ್ಷತಾ ಕ್ರಮಗಳ ಮಾಹಿತಿ. ಬಿದರಿ, ಕಲೆ, ಸಿ.ಪಿ.ಆರ್. ಸುಸ್ಥಿರ ಅಭಿವೃದ್ಧಿಗಳ ತರಬೇತಿ, ಕಲರ್ ಪಾರ್ಟಿ, ಜಾನಪದ ನೃತ್ಯ. ದೇಶಭಕ್ತಿ ನೃತ್ಯ. ಎರೋಬಿಕ್ ಡ್ಯಾನ್ಸ್, ಸರ್ವಧರ್ಮ * ಪ್ರಾರ್ಥನೆ ಮೊದಲಾದವು ಜಾಂಬೊರೇಟ್ನ ಭಾಗವಾಗಿರಲಿವೆ. ವಿವಿಧ ಚಟುವಟಿಕೆಗಳು ಯುವಕ, ಯುವತಿಯರಲ್ಲಿ ಶಿಸ್ತು, ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕ ಹಾಗೂ ಆಧ್ಯಾತಿಕ ಬೆಳವಣಿಗೆಗೆ ನೆರವಾಗಲಿವೆ ಎಂದು ಹೇಳಿದರು. ಶಹಾಪುರ ಗೇಟ್ ಸಮೀಪದ ಶಾಹೀನ್ ಕಾಲೇಜಿನಲ್ಲಿ ಈಗಾಗಲೇ ಚಟುವಟಿಕೆಗಳಿಗೆ ವೇದಿಕೆ. ಪ್ರತಿನಿಧಿಗಳಿಗೆ ಊಟ, ಕುಡಿಯುವ ನೀರು, ವಸತಿ, ಸಾರಿಗೆ ವ್ಯವಸ್ಥೆ ಮತ್ತಿತರ ಸಿದ್ಧತಾ ಕಾರ್ಯಗಳು ಭರದಿಂದ ನಡೆದಿವೆ ಎಂದವರು ಹೇಳಿದತು.
ಪತ್ರಿಕಾ ಗೋಷ್ಠಿಯಲ್ಲಿ ಜಾಂಬೊರೇಟ್ ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಕ್ಯಾಂಪ್ ನಾಯಕ ರಮೇಶ ತಿಬಶೆಟ್ಟಿ, ಕ್ಯಾಂಪ್ ನಾಯಕಿ ಜೈಶೀಲಾ ಸುದರ್ಶನ್. ಜಿಲ್ಲಾ ಸಂಘಟಕಿ ನಾಗರತ್ನ ಪಾಟೀಲ ಹಾಗೂ ಇತರರಿದ್ದರು.