ಸೌಜನ್ಯಗೆ ‘ವಿದ್ಯಾಸಿರಿ’ ಪ್ರಶಸ್ತಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.28: ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದ ವಿದ್ಯಾರ್ಥಿನಿ ಎಂ.ಪಿ.ಎಂ. ಸೌಜನ್ಯರಾಣಿ ಅವರಿಗೆ ತಾಲೂಕಿನ ಮಾನಿಹಳ್ಳಿಯ ಪುರವರ್ಗ ಮಠದಲ್ಲಿ ‘ವಿದ್ಯಾಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಠದ ಮಳೆಯೋಗೀಶ್ವರ ಸ್ವಾಮೀಜಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿ ಸಾಧನೆ ಮಾಡಿರುವ ಸೌಜನ್ಯ ಅವರನ್ನು ಸತ್ಕರಿಸಿರುವುದು ನಮ್ಮ ಮಠಕ್ಕೆ ಹೆಮ್ಮೆ ತಂದಿದೆ. ಇತರೆ ವಿದ್ಯಾರ್ಥಿಗಳಿಗೂ ಈ ಸಾಧನೆ ಪ್ರೇರಣೆಯಾಗಿದ್ದಾಳೆ. ಮುಂದಿನ ತರಗತಿಗಳಲ್ಲೂ ಉತ್ತಮ ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡಬೇಕು ಎಂದು ಹೇಳಿದರು.
ಎಂ.ಪಿ.ಎಂ. ಪಕ್ಕೀರಗೌಡ, ಉಪನ್ಯಾಸಕ ಎಂ.ಪಿ.ಎಂ.ಶಿವಪ್ರಕಾಶ್, ಶಿಕ್ಷಕಿ ವಿದ್ಯಾವತಿ ಇದ್ದರು.