ಸೌಕರ್ಯ, ಬಸ್‌ಗೆ ಆಗ್ರಹಿಸಿ ಪ್ರತಿಭಟನೆ

ದೇವದುರ್ಗ.ಜು.೩೦- ಕಿತ್ತೂರು ಚೆನ್ನಮ್ಮ ಹಾಸ್ಟೇಲ್ ಹಿಂಭಾಗದಲ್ಲಿ ಬರುವ ಎಲ್ಲ ಕಾಲೇಜ್ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಲು ಹಾಗೂ ಗೂಗಲ್ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಓಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಡಿಪ್ಲೊಮಾ ಕಾಲೇಜು ಶೀಘ್ರ ಉದ್ಘಾಟನೆ ಮಾಡಬೇಕು ಹಾಗೂ ಕಿತ್ತೂರು ಚನ್ನಮ್ಮ ಹಾಸ್ಟೇಲ್‌ನಿಂದ ಬರುವ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಎಲ್ಲ ಬಸ್‌ಗಳನ್ನ ನಿಲ್ಲಿಸಬೇಕು ಜತೆಗೆ ಬಸ್ ಸ್ಟ್ಯಾಂಡ್ ನಿರ್ಮಿಸಬೇಕು ಹಾಗೂ ಜಾಲಹಳ್ಳಿಯಿಂದ ಬರುವ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಪಾಸ್ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಎಲ್ಲ ವಸತಿ ನಿಲಯದಲ್ಲಿ ವಾರ್ಡನ್‌ಗಳು ಕಡ್ಡಾಯವಾಗಿ ಸಂಬಂಧಪಟ್ಟ ಹಾಸ್ಟೇಲ್‌ನಲ್ಲೇ ಇರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷೆ ರೂಪ ಶ್ರೀನಿವಾಸ್ ನಾಯಕ ಆಗ್ರಹಿಸಿದರು. ಈ ವೇಳೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.