ಸೌಂದರ್ಯ ಸಮಿಕ್ಷೆ ಕೃತಿ ಸಾಹಿತ್ಯ ಕೃಷಿಕನಾಗಿಸಿದೆ: ಸುಬ್ಬಣ್ಣ ಕರಕನಳ್ಳಿ

ಬೀದರ :ಜ.24:ನಗರದ ಗುಂಪಾ ರಿಂಗ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ ಮನೆಯಂಗಳದಲ್ಲಿನ ಮಾತು ಜಿಲ್ಲಾ ಹಾಗೂ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 72 ನೇ ಮನೆಯಂಗಳದಲ್ಲಿನ ಮಾತು ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಧ್ಯಾಪಕ ಡಾ. ಮನೋಹರ ಜಿ ಮೇತ್ರೆ ಉದ್ಘಾಟನೆ ಮಾಡಿ ಸ್ನೇಹಿತ ಸುಬ್ಬಣ್ಣ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿದ್ದರು ಸಾಹಿತ್ಯದಲ್ಲಿ ಆಸಕ್ತಿಯಿಂದ ಕ್ರಾಂತಿಯ ಬೆಳಕು ಸಂಘರ್ಷದ ಬೆಳಕು ಮೌಲ್ಯಯುಕ್ತವಾದ ಕೃತಿ ಬರೆದಿದ್ದಾರೆ. ಸರಳ ಜೀವನವೇ ಇವರನ್ನು ದೊಡ್ಡವರಾಗಿ ಮಾಡಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ 15 ವರ್ಷಗಳ ಹಿಂದ ಖ್ಯಾತ ಕವಿಗಳೆಂದು ನಾನು ಕರೆಯುತ್ತಿದೆ. ನಿಜಕ್ಕೂ ಖ್ಯಾತ ಕವಿಗಳಾಗಿದ್ದಾರೆ. ಶಿವಕುಮಾರ ಪಾಂಚಾಳ ಕನ್ನಡ ಹಾಡುಗಳನ್ನು ಹಾಡಿದರು ಲಕ್ಷ್ಮಣರಾವ ಕಾಂಚೆ ಜಾನಪದ ಹಾಡುಗಳು ಹಾಡಿದರು. ಬಡತನ ಬೆನ್ನಹತ್ತಿ ಉನ್ನತ ವ್ಯಾಸಂಗವನ್ನು ಕಲಿಯಲಿಕ್ಕೆ ತಂದೆ ತಾಯಿ ಅಣ್ಣತಮ್ಮ ಕಾರಣರಾಗಿದ್ದಾರೆ. ಪ್ರಾಥಮಿಕ ಶಾಲಾ ಮುಖ್ಯಗುರುಗಳು ಅಕ್ಷರ ಅಭ್ಯಾಸದ ಜೋತೆ ಮನೆಪಾಠವನ್ನು ಕಲಿಸುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಮುಖ್ಯ ಗುರು ವಿಠ್ಠಲರಡ್ಡಿ ನೆನಪಿಸಿ, ಕೆ ಎ ಎಸ್ ಪರೀಕ್ಷೆ ಪಾಸಾಗಿದ್ದರು ಸಿಂಧುತ್ವ ವಿಳಂಬದ ಕಾರಣ ನೌಕರಿ ಸಿಗಲಿಲ್ಲ. ಹತ್ತು ವರ್ಷ ಪದವಿ ಕಾಲೇಜು ಉಪನ್ಯಾನಸಕರಾಗಿ ಸೇವೆ. ವಿಶ್ವ ಕನ್ನಡಿಗರ ಸಂಸ್ಥೆ ಸಂಸ್ಥಾಪನೆ ಮಾಡಿ ಕಳೆದ ಆರು ವರ್ಷಗಳಿಂದ ರಾಜ್ಯ ಮಟ್ಟದ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿದ್ದೇನೆ. 2016 ರಿಂದ 2018 ವರೆಗೆ ಕನ್ನಡ ಭವನಕ್ಕಾಗಿ ಹೋರಾಟ ಮಾಡಿರುವ ಸುದ್ದಿಗಳು ಪತ್ರಿಕೆಗಳು ಪ್ರಕಟಣೆಯನ್ನು ಮಾಡಿವೆ.ಕಪವೈಪಮೀವಿವಿಯಲ್ಲಿ ನಡೆದಿರುವ ಹಗರಣದ ವಿರುದ್ದ ಸಾರಿದ ಸಮರ ನೆನಪಿಸಿಕೊಂಡರು. ಸಾಹಿತ್ಯ ಕೃಷಿಗೆ ಪ್ರೇರಣೆಯಾದವರು ರಾಷ್ಟ್ರ ಕವಿ ಡಾ. ಜಿ ಎಸ್ ಶಿವರುದ್ರಪ್ಪಾ ಕೃತಿ ಸೌಂದರ್ಯ ಸಮಿಕ್ಷೆ ಡಾ. ಹ ಮಾ ನಾಯಕರ ಅಂಕಣ ಬರಹಗಳು ಕಾರಣ. ಜ್ಞಾನ ದರ್ಶನ ಅಭಿಯಾನದ ಸಂಪನ್ಮೂಲ ವ್ಯಕ್ತಿಯಾಗಿ ಗೌತಮ ಖಾನಪೂರ ಕವಿತಾ ಹುಷಾರೆ ಜೊತೆಗೆ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡರು. ಪ್ರಗತಿಗೆ ಶಿಕ್ಷಣವೇ ಮೂಲಃ ಸಮಸ್ಯೆಗಳು ಹೋಗಲಾಡಿಸಲು ಶಿಕ್ಷಣವೇ ಶಕ್ತಿ ಮನುಷ್ಯನಿಗೆ ಆಹಾರ ಗಾಳಿ ನೀರು ಹೇಗೆ ಮುಖ್ಯವು ಶಿಕ್ಷಣವು ಅಷ್ಟೆ ಮುಖ್ಯವಾಗಿದೆಯೆಂಬುವ ಅಂಬೇಡ್ಕರ ಮಾತು, ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಎನ್ನುತ್ತಿವೆ ಅಥ್ರೈಸಿಕೊಳ್ಳುವಲ್ಲಿ ಸೋತನಾವು ನಮ್ಮದೇ ಶ್ರೇಷ್ಠ ಎನ್ನುತ್ತಿದ್ದೇವೆ ರಾಷ್ಟ್ರ ಕವಿ ಕುವೇಂಪು ರವರ ಮಾತು ನೆನಪಿಸಿದರು. ಅಂಬೇಡ್ಕರ ಭವನದ ವಿಠಲರಾವ ಮನ್ನಾಏಖ್ಖೇಳಿ ಲಕ್ಷ್ಮಣರಾವ ಮೀಠಾರೆ ನಾಗಪ್ಪಾ ಮಾಸ್ಟರ, ರೇಖಾ ಪಟೇಲ್ ಡಾ. ಸುನೀತಾ ಪಂಕಜಕುಮಾರ ಸೂರ್ಯವಂಶಿ, ಮುಂತಾದವರ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಎಸ್. ಮನೋಹರ ವಹಿಸಿ ಸಾಹಿತಿಗಳ ಮನೆಯಲ್ಲಿ ಮಾತುಕತೆ ಸಾಹಿತಿಗಳ ಸಲಹೆ ಸೂಚನೆಗಳು ಪಡೆದುಕೊಂಡು ಸಾಹಿತಿಗಳ ಜೀವನ ಹೋರಾಟವನ್ನು ಪರಿಚಯ ಮಾಡಿಕೊಡುವ ಕೆಲಸ ಸಾಹಿತ್ಯ ಪರಿಷತ್ತು ಮಾಡಿಕೊಂಡು ಬರುತ್ತಿದೆ. ಗಟ್ಟಿ ದಿಟ್ಟತನದ ಹೋರಾಟ ಮತ್ತು ಸಾಹಿತ್ಯ ಕೃಷಿ ಮಾಡುತ್ತಿರುವ ಸುಬ್ಬಣ್ಣ ಕರಕನಳ್ಳಿ ಸರಳ ಜೀವನಕ್ಕೆ ಸಾಕ್ಷಿಯಾಗಿದ್ದಾರೆ. ಕನ್ನಡ ಸಾಹಿತ್ಯಲೋಕದಲ್ಲಿ ದೊಡ್ಡ ಸಾಹಿತಿಯಾಗಿ ನಮ್ಮ ಬೀದರ ಜಿಲ್ಲೆಗೆ ಕಿರ್ತಿ ತರಲಿ. ನಿರೂಪಣೆ ಪೆÇ್ರ. ಜಗನ್ನಾಥ ಕಮಲಾಪೂರೆ ಸ್ವಾಗತ ಮಹೇಶ ಗೋರನಾಳಕರ ವಂದನೆ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಟಿ. ಎಂ. ಮಚ್ಚೆ ಕನ್ನಡ ಭವನ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನವನ್ನು ನೀಡಿ ವಂದನಾರ್ಪಣೆ ಮಾಡಿದರು.