ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ  ರಾಜ್ಯ ನಾಯಕರ ಭೇಟಿ.

ದಾವಣಗೆರೆ ಜ-16;ಎಸ್ ಡಿ ಪಿ ಐ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಸಮ್ಮುಖದಲ್ಲಿ ದಾವಣಗೆರೆಯಲ್ಲಿ ಜರುಗಿತು.     ಪ್ರಾಸ್ತಾವಿಕವಾಗಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ ಶಾಸಕರು ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ ಕಳೆದ 25 ವರ್ಷಗಳಿಂದ ಶಾಸಕರಾಗಿ ಜನರ ಕಷ್ಟಗಳಿಗೆ ಸ್ಪಂದನೆ ಮತದಾರರಿಗೆ ಮೋಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಇವರ ಕೂಡುಗೆಯೇನು?ಕ್ಷೇತ್ರದಲ್ಲಿ ಒಂದು ಸರಿಯಾದ ಸಾರ್ವಜನಿಕ ಆಸ್ಪತ್ರೆ ಇಲ್ಲದ ಕಾರಣ ಇಲ್ಲಿ ವಾಸಿಸುವ ಜನರು ಬಡತನ ರೇಖೆಗಿಂತ ಕೆಳಗೆ ಇರುವುದರಿಂದ ಚಿಕಿತ್ಸೆಗಾಗಿ ಪರಿದಾಡುವ ಪರಿಸ್ಥಿತಿ ಇಲ್ಲಿಯ ಜನರದು, ಹೆಗಡೆ ನಗರ ನಿವಾಸಿಗಳಿಗೆ  ಪ್ರತಿ ಬಾರಿ ಚುನಾವಣೆ ಬಂದಾಗ ಇವರಿಗೆ ವಸತಿಗೃಹ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿ ಇವರನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸಲಾಗುತ್ತಿದೆ ಆದರೆ ಇವರಿಗೆ ಇಲ್ಲಿಯವರೆಗೆ ಶಾಶ್ವತ ವಸತಿಗೃಹ ನಿರ್ಮಾಣ ಮಾಡಿಕೊಡಲು ಇಲ್ಲಿನ ಶಾಸಕರಿಗೆ ಸಾಧ್ಯವಾಗಲಿಲ್ಲ, ಅದೇ ರೀತಿ ಪೌರಕಾರ್ಮಿಕರಿಗೆ ಖಾಯಂ ಗೊಳಿಸುವುದಾಗಲಿ ಹಾಗೂ ಅವರಿಗೆ ಶಾಶ್ವತ ವಸತಿಗೃಹ ವ್ಯವಸ್ಥೆಯಾಗಲಿ ಹಾಗೂ ಇವರ ಕಷ್ಟಗಳನ್ನು ಯಾರು ಆಲಿಸದ ಪರಿಸ್ಥಿತಿ ಉಂಟಾಗಿದೆ  ಮತ್ತು ಹಲವಾರು ಚುನಾವಣೆಗಳಲ್ಲಿ ಆಶ್ವಾಸನೆ ನೀಡಿದಂತೆ ಮಂಡಕ್ಕಿ ಬಟ್ಟಿ ಗಳಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಮಾಡುವುದಾಗಲಿ ಮತ್ತು ಮಂಡಕ್ಕಿ ಬಟ್ಟಿ ಕಾರ್ಮಿಕರಿಗೆ  ಶಾಶ್ವತ ಮನೆ ಇಲ್ಲದ ಕಾರಣ ಬರುವ ಅಲ್ಪಸ್ವಲ್ಪ ಕೂಲಿಯಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ ಮತ್ತು ಇವರ ಪರಿಸ್ಥಿತಿ ಸೂಚನೀಯವಾಗಿದೆ  ಮತ್ತು ಆ ಕಾರ್ಮಿಕರಿಗಾಗಿ ಲೇವಟ್ ಮಾಡಿ ಮನೆ ನಿರ್ಮಿಸಿ ಕೊಡುವ ಆಶ್ವಾಸನೆ ನೀಡಿದಾದರೂ ಅದು ಇಲ್ಲಿಯವರೆಗೆ ಈಡೇರಲಿಲ್ಲ ಆಶ್ವಾಸನೆಗಳು ಕೇವಲ ಆಶ್ವಾಸನೆಗಳಾಗಿ ಉಳಿದಿವೆ.*  ಕ್ಷೇತ್ರದಲ್ಲಿ ಇಂತಹ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ ಈ ಬಗ್ಗೆ ಕಾರ್ಯಕರ್ತರು ಕ್ಷೇತ್ರದ ಜನತೆಗೆ ಎಳೆ ಎಳೆಯಾಗಿ ತಿಳಿಸಿ ಹೇಳಬೇಕು ಮತ್ತು ಪರ್ಯಾಯ ರಾಜಕೀಯ ವ್ಯವಸ್ಥೆಗೆ ಎಸ್ ಡಿ ಪಿ ಐ ಅನಿವಾರ್ಯತೆ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ದಾವಣಗೆರೆಯಲ್ಲಿ ಈಗಾಗಲೇ ಘೋಷಣೆ ಮಾಡಿರುವ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡಬೇಕು, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಕರೆಕೊಟ್ಟರು.