ಸೋವೆನಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಕಮಲಮ್ಮ ಆಯ್ಕೆ


ಸಂಜೆವಾಣಿ ವಾರ್ತೆ
ಸಂಡೂರು:ಅ:6:  ತಾಲೂಕಿನ ಸೋವೆನಹಳ್ಳಿ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಮಲಮ್ಮ ಗಂಡ ಸಿದ್ದಲಿಂಗಪ್ಪ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ ರಡ್ಡಿ  ಘೋಷಿಸಿದರು.
ಸೋವೆನಹಳ್ಳಿ ಗ್ರಾಮ ಪಮಚಾಯಿತಿ 2ನೇ ಅವಧಿಗೆ ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಯಿತು ಈ ಸಂದರ್ಭದಲ್ಲಿ ಕಾಳಮ್ಮ ಗಂಡ ಪರುಸಪ್ಪ ಹಾಗೂ ಚಲುವಾದಿ ಗೀತ ಗಂಡ ಪ್ರಕಾಶ್ ಇವರು ಸ್ಪರ್ಧಿಸಿದ್ದರು ಒಟ್ಟು 9 ಸದಸ್ಯರ ಬಲವಿದ್ದು ಇದರಲ್ಲಿ 5 ಮತಗಳನ್ನು ಕಾಳಮ್ಮ ಪರುಸಪ್ಪ ಪಡೆದುಕೊಂಡು  ಅಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಅಧ್ಯಕ್ಷ ಹುದ್ದೆಯು ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ, ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ  ನಿರ್ಧರಿತವಾಗಿತ್ತು, ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧೆಯು ಇಲ್ಲದೆ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷ ಹುದ್ದೆಯು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ  ಕಾರ್ಯದರ್ಶಿ ಜಿ. ಪಾಪಣ್ಣ, , ಸಿಬ್ಬಂದಿಗಳು ಇತರ ಹಲವಾರು ಮುಖಂಡರು ಉಪಸ್ಥಿತರಿದ್ದರು. ತಾಲೂಕಿನ ಸೋವೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಚುನಾವಣಾ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಕಮಲಮ್ಮ ಹಾಗೂ ಉಪಾಧ್ಯಕ್ಷರಾಗಿ ಕಾಳಮ್ಮ ಇವರು ಆಯ್ಕೆಯನ್ನು ಚುನಾವಣಾಧಿಕಾರಿ ಮಂಜುನಾಥ ರೆಡ್ಡಿ ಘೋಷಿಸಿದರು.

One attachment • Scanned by Gmail