ಸೋಲ್ಜರ್ ಜಿಮ್: ವಿಜೇತರಿಗೆ ಬಹುಮಾನ ವಿತರಣೆ

ಕಲಬುರಗಿ.ಮೇ 14: ಇಲ್ಲಿನ ಕರುಣೇಶ್ವರ ನಗರ ಬಡಾವಣೆಯ ಸೋಲ್ಜರ್ ಜಿಮ್ ಅಂಡ್ ಫಿಟ್ನೆಸ್ ಸೆಂಟರ್ ನಲ್ಲಿ ಸುಸ್ಥಿರ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಚಿತ್ರರಂಗದ ನಾಯಕಿ ನಟಿ ರಂಜಿತಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತಾ, ಆರೋಗ್ಯದ ದೃಷ್ಟಿಯಿಂದ ಸದಾ ಚೈತನ್ಯದಿಂದ ಇರಲು ಪೂರಕವಾಗಿ ನಿತ್ಯ ಲಘು ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ವಿಜೇತರು:
ಶೋಲ್ಡರ್ ಪ್ರೆಸ್: ಮಹೇಂದ್ರ (ಪ್ರಥಮ), ವಿಶಾಲ್ (ದ್ವಿತೀಯ), ಡೆಡ್ ಲಿಫ್ಟ್ ವಿಭಾಗದಲ್ಲಿ ಆಕಾಶ್ (ಪ್ರಥಮ) ಹಾಗೂ ಅಮಿತ್ (ದ್ವಿತೀಯ), ಪುಲ್-ಅಪ್ಸ್ ವಿಭಾಗದಲ್ಲಿ ಶ್ರೀಮಂತ (ಪ್ರಥಮ) ಹಾಗೂ ಇಬ್ರಾಹಿಂ (ದ್ವಿತೀಯ), ರೋಪ್ ವಿಭಾಗದಲ್ಲಿ ಮೇಘರಾಜ್ (ಪ್ರಥಮ) ಮತ್ತು ಮಹಿಳೆಯರ ಸ್ಕ್ವಾಟ್ಸ್ ವಿಭಾಗದಲ್ಲಿ ಶ್ವೇತಾ (ಪ್ರಥಮ) ಹಾಗೂ ಪೂಜಾ (ದ್ವಿತೀಯ), ಪ್ಲಾಂಕ್ಸ್ ವಿಭಾಗದಲ್ಲಿ ಪಲ್ಲವಿ (ಪ್ರಥಮ) ಮತ್ತು ಶ್ವೇತಾ (ದ್ವಿತೀಯ) ಬಹುಮಾನಗಳನ್ನು ಪಡೆದರು.
ಸೆಂಟರ್ ಮುಖ್ಯಸ್ಥ ಶರಣು ಎಸ್.ಎಚ್, ಕೋಚ್ ಕರಣ್ ನಾಟಿಕಾರ್, ಮಲ್ಲಿಕಾರ್ಜುನ ಯಳಮೇಲಿ ಹಾಗೂ ಅಂಬಿಕಾ ಸೇರಿದಂತೆ ಇತರರಿದ್ದರು.