ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.17: ವಿದ್ಯಾರ್ಥಿಗಳು ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿ, ಸೋತ ಮಕ್ಕಳು ಮುಂದೆ ಗೆಲುವು ಸಾಧಿಸಲು ಶ್ರಮಿಸಬೇಕೆಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ  ಉಪಾಧ್ಯಕ್ಷ ವಾಸುದೇವ ಅವರು ಹೇಳಿದರು.
ಅವರು ನಿನ್ನೆ ನಗರದ ವಾರ್ಡ್ಲ ಶಾಲಾ ಮೈದಾನದಲ್ಲಿ ನಡೆದ ಬ್ರೂಸ್ ಪೇಟೆ ವಲಯ ಮಟ್ಟದ ಕ್ರೀಡಾ ಕೂಟ ಸಮಾರೋಪ ಸಮಾರಂಭದಲ್ಲಿ ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ತಾಲೂಕಿನ ಸಂಜೀವರಾಯನಕೋಟೆ, ಮಿಂಚೇರಿ,ಹಲಕುಂದಿ, ಹೊನ್ನಳ್ಳಿ,ಹೊನ್ನಳ್ಳಿ ತಾಂಡ ಶಾಲೆಗಳ ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು.
ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ಪರಿವೀಕ್ಷಕ ವೀರನಗೌಡ ಗೌಡ, ರವಿಚೇಳ್ಳಗುರ್ಕಿ, ವಲಯ ಕಾರ್ಯದರ್ಶಿ ರಘೋತ್ತಮ, ಚೆನ್ನಕೇಶವಲು, ದೊಡ್ಡ ಕುಮಾರ, ಬಸವರಾಜ, ಸಕ್ಲೇನ್,ಮಾರಣ್ಣ ಕೆ,ಷಫಿ,ನಾಟೆಕರ್ ಮಂಜುನಾಥ್, ದಯಾನಂದ, ಕೋಟೆ ನಾಗರಾಜ್, ರಾಮಪ್ಪ ಕೆ,ಇಬ್ರಾಹಿಂ ಪುರ ಎರ್ರಿಸ್ವಾಮಿ, ರಾಜೇಂದ್ರ ಪ್ರಸಾದ್ ಮುಂತಾದವರು ಇದ್ದರು.