ಸೋಲು ಗೆಲುವು ಸಮನಾಗಿ ಸ್ವೀಕರಿಸಿ

ಸಿಂದಗಿ :ಫೆ.23: ಸೋತೆನೆಂದು ಕುಗ್ಗಬೇಡ,ಗೆದ್ದೇನೆಂದು ಹಿಗ್ಗಬೇಡ, ಸೋಲೇ ಗೆಲುವಿನ ಸೋಪಾನ, ಸೋಲು ಗೆಲುವು ಸಮನಾಗಿ ಸ್ವೀಕರಿಸಿ, ವಿದೇಶಿ ಕ್ರೀಡೆಗಿಂತ ಸ್ವದೇಸಿ ಕ್ರೀಡೆಯನ್ನು ಪ್ರೀತಿಸಿ ಎಂದು ಅರವಿಂದ ಮನಗೂಳಿ ಹೇಳಿದರು.

ಗ್ರಾಮದಲ್ಲಿ ಶನಿವಾರ ಹಜರತ್ ಮಿಟ್ಟೆವಾಲಿ ಉರುಸ್ ಜಾತ್ರಾ ಪ್ರಯುಕ್ತ ಹಮ್ಮಿಕೊಂಡ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಪೈಲಾವಾನರನ್ನು ಕರೆಸಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿ ಗೆದ್ದ ಪೈಲ್ವಾನರಿಗೆ ನಗದು ಬಹುಮಾನ ನೀಡಿ ಸೋತ ಪೈಲ್ವಾನರಿಗೆ ಸಮಾಧಾನ ಬಹುಮಾನ ನೀಡುತ್ತಿರುವ ಶ್ರೀ ಹಜರತ್ ಮಿಟ್ಟೆವಾಲಿ ಜಾತ್ರಾ ಸಮೀತಿಯ ಕಾರ್ಯ ಶ್ಲಾಘನೀಯವಾದುದ್ದು ಇಡೀ ಸಿಂದಗಿ ತಾಲೂಕಿನಲ್ಲೇ ಕುಸ್ತಿ ಆಯೋಜನೆಗೆ ಹೆಸರುವಾಸಿಯಾದ ಗ್ರಾಮ ಇದಾಗಿದೆ ಎಂದು ಹೇಳಿದರು.

ಗಮನ ಸೆಳೆದ ಮಹಿಳಾ ಕುಸ್ತಿ ಕುಸ್ತಿ ಪಂದ್ಯಾವಳಿಯಲ್ಲಿ ಮಹಿಳೆಯರ ಕುಸ್ತಿ ಸಾರ್ವಜನಿಕರ ಗಮನ ಸೆಳೆಯಿತು ಮಹಾರಾಷ್ಟ್ರದಿಂದ ಎರಡು ಒಟ್ಟು ನಾಲ್ಕು ಮಹಿಳಾ ಕುಸ್ತಿ ಪಟುಗಳ ಮದ್ಯ ನಡೆದ ಹಣ ಹಣಿಯಲ್ಲಿ ಧಾರವಾಡದ ಪೈಲ್ವಾನ್ ಸಂಗೀತಾ ಮೂರು ಜನರನ್ನು ಸೋಲಿಸಿ 35 ಸಾವಿರ ನಗದು ಬಹುಮಾನ ಗೆದ್ದು ಗಮನ ಸೆಳೆದಳು.

ಫೈನಲ್ ಗೆದ್ದ ಕರ್ನಾಟಕ ಕೇಸರಿ ಕಾರ್ತಿಕ್ ಮಹಾರಾಷ್ಟ್ರದ ಚಾಂಪಿಯನ್ ವಿಲಾಸ ದೋಯಿಪಡೆ ಹಾಗೂ ಕರ್ನಾಟಕ ಕೇಸರಿ ಕಾರ್ತಿಕ್ ಕಾಟೆ ಮದ್ಯ 2 ಲಕ್ಷದ ಬಹುಮಾನದ ಕೊನೆಯ ಫೈನಲ್ ಕುಸ್ತಿ ಜರುಗಿತು ಕೊನೆಯಲ್ಲಿ ಕಾರ್ತಿಕ್ ಕಾಟೆ ಗೆಲುವು ಸಾದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿ . ಪಂ. ಸದಸ್ಯ ಎನ್ ಆರ್ ತಿವಾರಿ, ಮೈಬೂಬಸಾಬ ಕಣ್ಣಿ, ಪ್ರಕಾಶ ಅಡಗಲ್ ರಜಾಕ್ ಬಾಗವಾನ, ಶಿವರಾಯ ಹಿಪ್ಪರಗಿ, ಅಬ್ಬಾಸಲಿ ಬಳೂರಗಿ, ಸಲೀಮ್ ಕಣ್ಣಿ, ದತ್ತಪ್ಪ ಬಳಗುಂಪಿ, ಅಬ್ಬಾಸಲಿ ಬಂಟನೂರ ರಜಾಕಸಾಬ್ ಮುಲ್ಲಾ, ದಾವಲಸಾಬ್ ಮುಲ್ಲಾ, ಸೇರಿದಂತೆ ಸುತ್ತಲಿನ ಗ್ತಾಮಸ್ಥರು ಇದ್ದರು.

ವರ್ಷದಲ್ಲಿ ಹನ್ನೆರಡು ತಿಂಗಳು ಜಾತ್ರೆಗಳು ಜರುಗುವ ಜ್ಯಾತ್ಯಾತೀತ ಗ್ರಾಮ ನಮ್ಮದು ಎಲ್ಲ ಸಮುದಾಯದ ಸಹಕಾರದಿಂದ ಹಿಂತಾ ದೊಡ್ಡ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆ ಆಗಿದೆ ಮುಂದಿನ ವರ್ಷ ಭಾರತ ಕೇಸರಿ ಹಾಗೂ ಪಂಜಾಬ್ ಕೇಸರಿ ಪೈಲ್ವಾನರನ್ನು ಕರೆಸಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡುತ್ತೇವೆ.
ಮೈಬೂಬಸಾಬ್ ಕಣ್ಣಿ
ಕಾರ್ಯದರ್ಶಿ ಅಂಜುಮನ್ ಕಮೀಟಿ