
ಸಂಜೆವಾಣಿ ವಾರ್ತೆ
ಸಂಡೂರು :ಫೆ:28 ಕ್ರೀಡೆಗಳಿಂದ ಮನಸ್ಸಿಗೆ ಉಲ್ಲಾಸ ತರಲು ಸಾಧ್ಯ. ಮನೋರಂಜನೆ ಸಾಂಸ್ಕೃತಿಕ ಕಾರ್ಯಕ್ರಮ ಕ್ರೀಡೆ ಇವುಗಳಿಂದ ಮಾನಸಿಕವಾಗಿ ನೆಮ್ಮದಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿವೆ. ಓದು ಒಕ್ಕಾಲು, ಬುದ್ದಿ ಮುಕ್ಕಾಲು ಎನ್ನವು ಗಾದೇ ಮಾತಿನಂತೆ ಪ್ರತಿವೋರ್ವವರು ಶಿಕ್ಷಣದ ಜೊತೆಗೆ ಕೌಶಲ್ಯದ ಬುದ್ದಿಯನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕಾಗಿದೆ. ಎಂದು ಸಂಡೂರು ವಿಧಾಸಭಾ ಕ್ಷೆತ್ರದ ಶಾಸಕರು, ಸಿಪಿ.ಎಲ್. ಕಾರ್ಯದರ್ಶಿಗಳು ಆದ ಈ. ತುಕರಾಮ ರವರು ತಿಳಿಸಿದರು.
ಅವರು ಸಂಡೂರು ತಾಲ್ಲೂಕಿನ ಗಂಡಿ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಮುರಾರಿಪುರ ಗ್ರಾಮದಲ್ಲಿ ಕ್ರಿಕೇಟ್ ಟೂರ್ನಮೆಂಟ್‍ಗೆ ಚಾಲನೆ ನೀಡಿ ಮಾತನಾಡಿ, ನಮ್ಮಲ್ಲಿ ಛಲ, ಸಾದನೆ ಮಾಡುವ ಗುಣಮುಖ್ಯ. ಸಾಧನೆಯಿಂದ ಮಾತ್ರ ಪ್ರಗತಿ ಸಾಧ್ಯ. ರಾಜಕೀಯ ಕ್ರೀಡೆ ಇನ್ನು ಹಲವಾರು ವಿವಿಧ ರಂಗಗಳಲ್ಲಿ ಸೋಲು ಗೆಲುವು ಏಳು ಬೀಳು ಸಾಮಾನ್ಯ. ಸೋಲು ಗೆಲುವಿಗೆ ಭಯ ಪಡದೇ ಈ ಎರಡನ್ನು ಸಮನಾಗಿ ಸ್ವೀಕರಿಸಿ ಧೈರ್ಯದಿಂದ ಮುನ್ನುಗ್ಗಿದರೆ ಮಾತ್ರ ಜೀವನದಲ್ಲಿ ಯಶಸ್ವುಕಾಣಲು ಸಾಧ್ಯ ಎಂದು ತಿಳಿಸಿದರು. ಪ್ರಾರಂಭದಲ್ಲಿ ಸಂಡೂರು ವಿಧಾನಸಬಾ ಕ್ಷೇತ್ರದ ಶಾಸಕರನ್ನು ಡೊಳ್ಳು ನಗಾರಿ ತಮಟೆಗಳೊಂದಿಗೆ ಸಂಭ್ರಮದಿಂದ ಗ್ರಾಮದ ಜನರು ಸ್ವಾಗತಿಸಿದರು. ಗ್ರಾಮಕ್ಕೆ ಪ್ರವೇಶಿಸಿದ ಶಾಸಕರು ಕೈ ಬೀಸುತ್ತಾ ಗ್ರಾಮದ ಯುವಕರು ಏರ್ಪಡಿಸಿದ್ದ ಕ್ರಿಕೇಟ್ ಟೂರ್ನಮೆಂಟ್‍ಗೆ ಚಾಲನೆ ನೀಡಿದರು ಅಲ್ಲದೇ ಶಾಸಕರು ಮೊಟ್ಟ ಮೊದಲನೆ ಬ್ಯಾಟಿಂಗ್ ಮಾಡುವುದರ ಜೊತೆಗೆ ಯುವಕರ, ಸಾರ್ವಜನಿಕರ ಗಮನ ಸೆಳೆದುದು ವಿಶೇಷವಾಗಿತ್ತು.