ಸೋಲು ಗೆಲುವಿನ ಸೋಪಾನ :ದೇವಮ್ಮ ಕವಲಿ

ಜೇವರ್ಗಿ :ನ.20: ಕ್ರೀಡೆಯಲ್ಲಿ ಸೋಲು ಗೆಲುವಿನ ಸೋಪಾನವಾಗಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಮ್ಮ ಚಂದ್ರಯ್ಯ ಕವಲಿ ಹೇಳಿದರು ಶಹಾಪುರ ತಾಲೂಕಿನ ಕೊಳ್ಳೂರು ಎಂ ಗ್ರಾಮದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡಾಕೂಟದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ನಾಯಕ್ ಮಾತನಾಡುತ್ತಾ ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಗ್ರಾಮೀಣ ಭಾಗದ ಕ್ರೀಡಪಟುಗಳು ಪ್ರತಿಭಾವಂತ ಕ್ರೀಡಾಪಟುಗಳಾಗುವುದು ಅವಶ್ಯವಿದೆಯೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಭೀಮಬಾಯಿ ಚಲವಾದಿ ದೇವಿಂದ್ರ ಗೌಡರ್ ಬಸಪ್ಪ ಮರ್ಕಲ್ ನಾಗಪ್ಪ ಅಮರಾಪುರ ರಾಮು ನಾಯಕ್ ದಳಪತಿ ಅಯ್ಯಣ್ಣ ತಾತ ಮಲ್ಲಪ್ಪ ಗೌಡೂರ್ ಮಲ್ಲಪ್ಪ ಬಂಗಿ ಚಂದಯ್ಯ ಕಾವಲಿ ವೀರೇಶ್ ಗುತ್ತಿಗೆದಾರರು ಸೇರಿದಂತೆ ಅನೇಕರಿದ್ದರು.