ಸೋಲು ಗೆಲುವಿನ ಲೆಕ್ಕಚಾರ : ಬೆಟ್ಟಿಂಗ್ ಗ್ರಹಚಾರ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮೆ.12: ಮೇ10 ರಂದು ನಡೆದ ವಿಧಾನ ಸಭಾ ಚುನಾವಣೆಯ ಪಲಿತಾಂಶವೇ ಎಲ್ಲಾರ ಬಾಯಲ್ಲಿ ಮನೆ ಮಾತಾಗಿದೆ.
ಮೊಳಕಾಲ್ಮೂರು ಕ್ಷೇತ್ರದ ಬಹುತೇಕ ಜನರ ಬಾಯಲ್ಲಿ ಕುಂತಲ್ಲಿ, ನಿಂತಲ್ಲಿ ಬಸ್ ಸ್ಟಾಂಡ್ ನಲ್ಲಿ ಹೋಟೆಲಿನಲ್ಲಿ ಚುನಾವಣೆಯ ಫಲಿತಾಂಶದ ವಿಷಯವೇ ಆಗಿದೆ. ಅವರವರ ಪಕ್ಷದ ನಾಯಕನ ಪರವಾದ ಮಾತುಗಳು. ಹೆಚ್ಚಾಗಿ ಕೇಳುತ್ತಲಿವೆ.  ನಮ್ಮ ಕ್ಷೇತ್ರದಲಂತೂ ಪಕ್ಷಕ್ಕಿಂತ ಅಭ್ಯರ್ಥಿಗಳ ಹೆಸರೇ ಹೆಚ್ಚು ಜನಪ್ರಿಯ  , “ಎನ್. ವೈ . ಮತ್ತು ಅಜ್ಜ” ಎನ್ನುವುದೇ ಹೆಚ್ಚು ಜನಪ್ರಿಯ ವಾಗಿದೆ. ಕೆಲವರು ನಮ್ಮ ಎನ್. ವೈ. ಗೆಲ್ಲುತ್ತಾರೆ ಎಂದರೆ? ಇನ್ನು ಕೆಲವರು ನಮ್ಮ ಅಜ್ಜ ಗೆಲ್ಲುತ್ತಾರೆ ಎಂದು ಜಿದ್ದಾಜಿದ್ದಿನ ಮಾತುಗಳನ್ನ ಆಡುತ್ತಾರೆ,      
ಕ್ಷೇತ್ರದ ಕೆಲವು ಹಳ್ಳಿಗಳಲಂತೂ ಬೆಟ್ಟಿಂಗ್   ಜೋರಾಗಿ ನಡೆದಿದೆ ಎಂದು ತಿಳಿದುಬಂದಿದೆ. “ನಮ್ಮ ಅಜ್ಜ ಗೆದ್ದೆ  ಗೇಲ್ತಾನೆ  ಎಷ್ಟು ಕಟ್ಟುತ್ತಿರಾ.. ಕಟ್ಟಿ “ಎಂದು ಕೆಲವರು, ನಮ್ಮ ” ಎನ್. ವೈ. ಜೀ. ಗೆಲ್ತಾನೆ ಎಷ್ಟು ಲಕ್ಷ ಕಟ್ಟುತ್ತಿರಾ? ಕಟ್ಟಿ ” ಎನ್ನುವರು, ಇನ್ನೊಂದು ಕಡೆ. ಈ ಬೆಟ್ಟಿಂಗ್ ದಂಧೆ ನೋಡಿ ಪ್ರಜ್ಞಾವಂತ, ಬುದ್ಧಿವಂತ ಸುಮ್ಮನೆ ನಗುತ್ತಿದ್ದಾನೆ.
ಇನ್ನು ಕೇವಲ ಹನ್ನೆರಡು ಘಂಟೆ ಸಮಯ ಬಾಕಿ ನಿಜವಾದ ಚುನಾವಣಾ ಫಲಿತಾಂಶ ಹೊರ ಬರುವುದ್ದಕ್ಕೆ ತಡಿಯಿರೋ.. ಎನ್ನುತ್ತಿದ್ದಾರೆ ಬುದ್ಧಿವಂತರು. ನೀರಲ್ಲಿ ನಿಂತ ಕಂಬ ಯಾವ ಕಡೆ ಬೀಳುತ್ತದೆ ಕಾದು ನೋಡಬೇಕು ಜಯಲಕ್ಷ್ಮಿ ಯಾರ ಕೊರಳಿಗೆ ಮಾಲೆ ಯಾಗಿ ಬೀಳುತ್ತಾಳೋ  ತಿಳಿಯದು.
ಆದರೂ ಜೋರು ರಾಜಕೀಯ ಲೆಕ್ಕಚಾರ … ಬೆಟ್ಟಿಂಗ್ ನಲ್ಲಿ ಹಣ ಕಳೆದು ಕೊಂಡವರಿಗೆ ಮನೆಗಳಲ್ಲಿ ಇದೆ ಗ್ರಹಚಾರ…