ಸೋಲು ಒಪ್ಪಿಕೊಳ್ಳಿ ಟ್ರಂಪ್‌ಗೆ ಕುಟುಂಬದ ಒತ್ತಡ

President Donald Trump speaks during a news conference at his Trump National Golf Club in Bedminster, N.J., Saturday, Aug. 15. (AP Photo/Susan Walsh)

ವಾಷಿಂಗ್ಟನ್, ನ ೯- ಚುನಾವಣಾ ಸೋಲನ್ನು ಒಪ್ಪಿಕೊಳ್ಳುವಂತೆ ಡೊನಾಲ್ಡ್ ಟ್ರಂಪ್ ಗೆ ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಇತರೆ ಸದಸ್ಯರು ಒತ್ತಡ ಹಾಕುತ್ತಿದ್ದಾರೆ..!!.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿರುವ ಕಾರಣ ಪತ್ನಿ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಈಗ ಈ ಸುದ್ದಿಯೂ ಹಬ್ಬಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಎದುರಾಳಿ ಜೋ ಬೈಡನ್ ಗೆದ್ದಿರುವುದು ಸತ್ಯ ಅದನ್ನು ಒಪ್ಪಿಕೊಳ್ಳಿ ಎಂದು ಹೇಳಿದವರಲ್ಲಿ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಇದ್ದಾರೆ. ಬೈಡನ್ ಅವರು ಮುಂದಿನ ಅಧ್ಯಕ್ಷ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಈ ಮೊದಲು ಡೊನಾಲ್ಡ್ ಟ್ರಂಪ್ ಜರಿದಿದ್ದರು. ಇದರ ಹಿಂದೆಯೇ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ.

ಟ್ರಂಪ್ ಅಳಿಯ ಜಾರೆಡ್ ಕುಶ್ನರ್ ಅವರು ಟ್ರಂಪ್ ಅವರ ಬಳಿ ಸೋಲೊಪ್ಪಿಕೊಳ್ಳುವಂತೆ ಈಗಾಗಲೇ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮೆಲಾನಿಯಾ ಟ್ರಂಪ್ ಕಳೆದ ತಿಂಗಳು ಟ್ರಂಪ್ ಗೆಲುವಿಗಾಗಿ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಆದರೆ ಈ ಕುರಿತು ಮೆಲಾನಿಯಾ ಟ್ರಂಪ್ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿ ನೀಡಿಲ್ಲ. ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ಸೋಲು ಕಂಡ ನಂತರ ಟ್ರಂಪ್ ಜೊತೆಗಿನ ವೈವಾಹಿಕ ಬದುಕನ್ನು ಅಂತ್ಯಗೊಳಿಸುವ ಪತ್ನಿ ಮೆಲಾನಿಯಾ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎನ್ನಲಾಗಿದೆ